ಪುತ್ತೂರು: ಸದಾ ಒಂದೊಂದು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿರುವ ದರ್ಬೆ ಬುಶ್ರಾ ಕಾಂಪ್ಲೆಕ್ಸ್ನಲ್ಲಿನ ನಯಾ ಚಪ್ಪಲ್ ಬಜಾರ್ ಮಳಿಗೆಯು ಈ ಬಾರಿ ಹತ್ತು ಮಂದಿ ವಿಶೇಷ ಚೇತನ ಮಕ್ಕಳನ್ನು ಗೌರವಿಸುವ ಮೂಲಕ ನ.14ದಿನದಂದು ಆಚರಿಸಲ್ಪಡುವ ಮಕ್ಕಳ ದಿನಾಚರಣೆಗೆ ವಿಶೇಷ ಕಳೆಯನ್ನು ಹೆಚ್ಚಿಸಿದ್ದಾರೆ.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ರವರು ವಿಶೇಷ ಚೇತನ ಮಕ್ಕಳನ್ನು ಗೌರವಿಸುವ ಮೂಲಕ ಮಾತನಾಡಿ, ಮಕ್ಕಳನ್ನು ನಾವು ದೇವರು ಎಂದು ಕರೆಯುತ್ತೇವೆ. ಮಕ್ಕಳ ದಿನಾಚರಣೆ ಸಂದರ್ಭ ವಿಶೇಷ ಮಕ್ಕಳನ್ನು ಗುರುತಿಸಿರುವ ರಫೀಕ್ ಎಂ.ಜಿರವರ ಕಾಳಜಿಯನ್ನು ಮೆಚ್ಚಬೇಕಾಗಿದೆ. ಸಮಾಜದಿಂದ ನಾವು ಏನು ಪಡೆಯುತ್ತೇವೆಯೋ ಅದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಅರ್ಪಿಸಿದಾಗ ದೇವರು ಆಶೀರ್ವದಿಸುತ್ತಾನೆ ಎನ್ನುವುದಕ್ಕೆ ರಫೀಕ್ ಎಂ.ಜಿರವರು ಸಾಕ್ಷಿಯಾಗಿದ್ದಾರೆ ಎಂದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ದೇವರನ್ನು ಸಂತೃಪ್ತಿಗೊಳಿಸುವ ಕಾರ್ಯವನ್ನು ಮಾಡಿದಾಗ ಸಾರ್ಥಕೈ ಪಡೆಯುತ್ತೇವೆ. ರಫೀಕ್ ರವರು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸಮಾಜ ಸೇವಕ ರಝಾಕ್ ಬಿ.ಎಚ್ ಬಪ್ಪಳಿಗೆ ಮಾತನಾಡಿ, ನಯಾ ಚಪ್ಪಲ್ ಬಜಾರ್ ನ ರಫೀಕ್ ರವರು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಅದರಲ್ಲಿ ಮುಂದಾಲೋಚನೆ ಇದ್ದೇ ಇದೆ. ರಫೀಕ್ ರವರೋರ್ವ ಉದ್ಯಮಿಯಾಗಿ, ರೋಟರಿ ಸಂಸ್ಥೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಮಾತನಾಡಿ ಶುಭ ಹಾರೈಸಿದರು. ರೋಟರಿ ಕ್ಲಬ್ ಪುತ್ತೂರು ಸದಸ್ಯರಾದ ವಿ.ಜೆ ಫೆರ್ನಾಂಡೀಸ್, ಪರಮೇಶ್ವರ ಗೌಡ, ಕಾರ್ಯದರ್ಶಿ ದಾಮೋದರ್ ಕೆ, ಏಷ್ಯನ್ ವುಡ್ನ ಇಸ್ಮಾಯಿಲ್, ರೋಟರಿ ಯುವ ಮಾಜಿ ಅಧ್ಯಕ್ಷ ನರಸಿಂಹ ಪೈ, ಶಿಕ್ಷಣ ಇಲಾಖೆಯ ಬಿ.ಐ.ಇ.ಆರ್.ಟಿ ಸೀತಮ್ಮ, ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ಸಿಬ್ಬಂದಿ ಸುಮಲತಾ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ, ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಮ್ಯಾನೇಜರ್ ಪ್ರಶಾಂತ್ ಸಹಿತ ಸಿಬ್ಬಂದಿ ಸಹಕರಿಸಿದರು.
ಹತ್ತು ಮಂದಿ ವಿಶೇಷ ಚೇತನರಿಗೆ ಗೌರವ..
ಹತ್ತು ಮಂದಿ ವಿಶೇಷ ಚೇತನ ಮಕ್ಕಳಾದ ಬನ್ನೂರು ಶಾಲೆಯ ಜೋಶಿಕಾ(5ನೇ), ಆರ್ಯಾಪು ಶಾಲೆಯ ಫಾತಿಮಾ(3ನೇ), ಕುದ್ರು ಶಾಲೆಯ ಯುಶ್ರಾ(2ನೇ), ಹಿರ್ತಡ್ಕ ಶಾಲೆಯ ಗ್ರೀಷ್ಮಾ(1ನೇ), ಅಂಕತ್ತಡ್ಕ ಶಾಲೆಯ ಸಾತ್ವಿಕ್(1ನೇ), ಕಬಕ ಶಾಲೆಯ ಆಯೂಬ್(9ನೇ), ಪುತ್ತೂರು ಶಾಲೆಯ ಸುಪ್ರೀತ್(7ನೇ), ಭವಿಷ್(1ನೇ), ಕೊಡಿಪ್ಪಾಡಿ ಶಾಲೆಯ ಸಾಝಿಲ್(2ನೇ), ಪೆರ್ಲಂಪಾಡಿ ಶಾಲೆಯ ಅನೀಶ್(10ನೇ)ರವರುಗಳನ್ನು ಗುರುತಿಸಿ ಅವರಿಗೆ ಡ್ರೆಸ್, ಸ್ಟೀಲ್, ಚಪ್ಪಲ್, ತವಾವನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಏಷ್ಯನ್ ವುಡ್ ಮಾಲಕ ತವಾ ಕೊಡುಗೆಯನ್ನು ನೀಡುವುದರೊಂದಿಗೆ ನಯಾ ಚಪ್ಪಲ್ ಬಜಾರ್ನ ರಫೀಕ್ ಎಂ.ಜಿರವರೊಂದಿಗೆ ಕೈಜೋಡಿಸಿದ್ದರು.
ಸೈಲೆಂಟ್ ವರ್ಕರ್ ರಫೀಕ್ರವರು..
ರೋಟರಿ ಪುತ್ತೂರು ಇದರಲ್ಲಿ ತೊಡಗಿಸಿಕೊಂಡಿರುವ ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ರವರು ಪ್ರತಿ ತಿಂಗಳು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ. ಸೈಲೆಂಟ್ ವರ್ಕರ್ ಆಗಿರುವ ರಫೀಕ್ರವರು ತನ್ನ ದುಡಿಮೆಯ ಲಾಭದಲ್ಲಿ ಒಂದಷ್ಟು ಭಾಗವನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಎಲ್ಲರಿಗೆ ಮಾದರಿಯಾಗಿದ್ದಾರೆ. ಸಮಾಜಕ್ಕೆ ತಮ್ಮಿಂದ ನೀಡುವ ಗುಣವಿದ್ದಾಗ ದೇವರು ಖಂಡಿತಾ ಆಶೀರ್ವದಿಸುತ್ತಾನೆ.
-ತನುಜಾ ಝೇವಿಯರ್, ಬಿಐಇಆರ್ಟಿ, ಶಿಕ್ಷಣ ಇಲಾಖೆ