*ನಮ್ಮ ಊರಿಗೆ ಗೌರವವನ್ನು ತರಲಿ- ಬಾಬು ಶೆಟ್ಟಿ ವೀರಮಂಗಲ
*ಪಿಎಂಶ್ರೀ ಶಾಲೆಯು ಪ್ರಗತಿ ಸಾಧಿಸಿದೆ- ಲೋಕೇಶ್ ಎಸ್.ಆರ್
*ತುಂಬಾ ಸಂತೋಷವಾಗಿದೆ- ಉಮೇಶ್ ನಾಯಕ್
*ಸಹಕಾರ ಸದಾ ದೊರೆತಿದೆ-ತಾರಾನಾಥ ಸವಣೂರು
ಪುತ್ತೂರು : ಕೇಂದ್ರ ಸರ್ಕಾರ ಪುರಸ್ಕೃತ ಪಿಎಂಶ್ರೀ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ನ. 14 ರಂದು ಮಕ್ಕಳ ದಿನ ದಿನಾಚರಣೆಯ ಅಂಗವಾಗಿ “ಪಿಎಂಶ್ರೀ ಸಡಗರ” ನಡೆಯಿತು.
ಮಕ್ಕಳ ದಿನಾಚರಣೆ,ನೆಹರುರವರ ಸಂಸ್ಮರಣೆ, ಪಿಎಂಶ್ರೀ ಯೋಜನೆಯ ವಿವಿದ ಚಟುವಟಿಕೆಗಳಾದ Field Vt,exposure Vt ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಅನುಭವ ಹಂಚಿಕೆ, ಪಿಎಂಶ್ರೀ ಯೋಜನೆಯಿಂದ ಕೊಡಮಾಡಿದ ಆಟೋಟ ಸಲಕರಣೆಗಳು, ಗ್ರಂಥಭಂಡಾರ, ಬಾಲಾಯೋಜನೆಯ ಕಲಿಕೋಪಕರಣಗಳು ಮತ್ತು ಪೂರ್ವ ಪ್ರಾಥಮಿಕ ಮಕ್ಕಳಿಗೆ ಶಾಲಾ ಬ್ಯಾಗ್, T-SHIRT, ಕಲಿಕಾ ಸಾಧನಗಳ ವಿತರಣೆ ನಡೆಯಿತು. ಪಿಎಂಶ್ರೀ ಯೋಜನೆಯಲ್ಲಿ ನೂತನವಾಗಿ ಸೇರಿದ ಯೋಗಶಿಕ್ಷಕಿ ಮಧುಶ್ರೀ ಮತ್ತು ಆಪ್ತಸಮಾಲೋಚಕಿ ಸುಮಿತ್ರಾ ಇವರನ್ನು ಸ್ವಾಗತಿಸುವ ಕಾರ್ಯಕ್ರಮದೊಂದಿಗೆ ವಿಷಯ ತಜ್ಞರಿಂದ Mentoring by Eminent Export ನಡೆಯಿತು. ಪಿಎಂಶ್ರೀ ಚಟುವಟಿಕೆಗಳ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ನಮ್ಮ ಊರಿಗೆ ಗೌರವವನ್ನು ತರಲಿ- ಬಾಬು ಶೆಟ್ಟಿ ವೀರಮಂಗಲ
ನರಿಮೊಗರು ಗ್ರಾ.ಪಂ, ಸದಸ್ಯ ಬಾಬು ಶೆಟ್ಟಿ ವೀರಮಂಗಲರವರು ಮಕ್ಕಳ ದಿನಾಚರಣೆ “ಪಿಎಂಶ್ರೀ ಸಡಗರ” ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್‍ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿ ವೀರಮಂಗಲ ಪಿಎಂಶ್ರೀ ಶಾಲೆಯು ಉನ್ನತವಾದ ಸ್ಥಾನವನ್ನು ಪಡೆಯುವ ಮೂಲಕ, ನಮ್ಮ ಊರಿಗೆ ಗೌರವವನ್ನು ತರಲಿ, ಈ ಶಾಲೆಯ ಮುಖ್ಯ ಗುರು ತಾರಾನಾಥ ಸವಣೂರು ಮತ್ತು ಶಿಕ್ಷಕ ವೃಂದದವರು ಶಾಲೆಯ ಶೈಕ್ಷಣಿಕ ಪ್ರಗತಿಯಲ್ಲಿ ದುಡಿಯುತ್ತಿದ್ದಾರೆ. ಶಾಲೆ ಮತ್ತು ಊರಿನ ಅಭಿವೃದ್ಧಿಯಲ್ಲಿ ನಾನು ಸದಾ ದುಡಿಯುತ್ತೇನೆ. ನನ್ನಿಂದ ಆಗುವ ಯಾವುದೇ ಕೆಲಸವನ್ನು ರಾಜಕೀಯ ರಹಿತವಾಗಿ ನಾನು ಮಾಡಿಕೊಡುತ್ತೇನೆ ಎಂದು ಹೇಳಿದರು.
ಪಿಎಂಶ್ರೀ ಶಾಲೆಯು ಪ್ರಗತಿ ಸಾಧಿಸಿದೆ- ಲೋಕೇಶ್ ಎಸ್.ಆರ್
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್‌ರವರು ಗ್ರಂಥ ಭಂಡಾರವನ್ನು ಉದ್ಘಾಟಿಸಿ, ಮಾತನಾಡಿ ವೀರಮಂಗಲ ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ತುಂಬಾ ಹಿರಿದಾಗಿದ್ದು, ಖಾಸಗಿ ಶಾಲೆಯನ್ನು ಮೀರಿ ಎಲ್ಲ ರೀತಿಯ ಸೌಕರ್‍ಯಗಳಿಂದ ವೀರಮಂಗಲ ಪಿಎಂಶ್ರೀ ಶಾಲೆಯು ಪ್ರಗತಿ ಸಾಧಿಸಿದೆ, ಈ ಶಾಲೆಯಲ್ಲಿ ಪುಸ್ತುಕ ಭಂಡಾರವನ್ನು ಪ್ರಾರಂಭಿಸಿರುವುದು ಅತ್ಯಂತ ಖುಷಿ ನೀಡಿದೆ. ಪುಸ್ತುಕ ಮನುಷ್ಯನ ಬದುಕನ್ನು ಬೆಳಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಪಿಎಂಶ್ರೀ ಶಾಲೆಯ ಕ್ರೀಯಾಶೀಲ ಮುಖ್ಯಗುರು ತಾರಾನಾಥ ಸವಣೂರು ಮತ್ತು ಶಿಕ್ಷಕರುಗಳ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ.
ತುಂಬಾ ಸಂತೋಷವಾಗಿದೆ- ಉಮೇಶ್ ನಾಯಕ್
ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ವೀರಮಂಗಲ ಶಾಲೆಯ ಪ್ರಗತಿಯನ್ನು ಕಂಡು ತುಂಬಾ ಸಂತೋಷವಾಗಿದೆ, ನಮಗೆ ಪುತ್ತೂರಿನಲ್ಲಿ ಒಳ್ಳೆಯ ಕ್ಷೇತ್ರ ಶಿಕ್ಷಣಾಧಿಕಾರಿ ಇದ್ದಾರೆ, ಜೊತೆಗೆ ಈ ಶಾಲೆಯಲ್ಲಿ ತಾರಾನಾಥ ಸವಣೂರುರವರಂಥ ಕ್ರೀಯಾಶೀಲ ಚಟುಚಟಿಕೆಯ ಮುಖ್ಯಗುರು ಇರುವುದು ಈ ಶಾಲೆಯ ಸೌಭಾಗ್ಯ ಎಂದು ಹೇಳಿದರು.
ಸಂತೋಷ ತಂದಿದೆ- ಪರಮೇಶ್ವರಿ
ನರಿಮೊಗರು ಸಿಆರ್ ಪಿ ಪರಮೇಶ್ವರಿರವರು ಮಾತನಾಡಿ ನನ್ನ ನರಿಮೊಗರು ಕ್ಲಸ್ಟರ್ ವ್ಯಾಪ್ತಿಯಲ್ಲಿ ವೀರಮಂಗಲ ಪಿಎಂಶ್ರೀ ಶಾಲೆ ಬರುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು
ಹೆಸರನ್ನು ಪಡೆಯಲಿ- ನಾರಾಯಣ ರೈ ಕುಕ್ಕುವಳ್ಳಿ
ಶಿಕ್ಷಣ ತಜ್ಞ ನಾರಾಯಣ ರೈ ಕುಕ್ಕುವಳ್ಳಿರವರು ಮಾತನಾಡಿ ವೀರಮಂಗಲ ಪಿಎಂಶ್ರೀ ಶಾಲೆಯು ರಾಷ್ಟ್ರ ಮಟ್ಟದಲ್ಲಿ ಉತ್ತಮವಾದ ಹೆಸರನ್ನು ಪಡೆಯಲಿ ಎಂದು ಶುಭಕೋರಿದರು.
ಸಹಕಾರ ಸದಾ ದೊರೆತಿದೆ-ತಾರಾನಾಥ ಸವಣೂರು
ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಶಾಲೆಯ ವರದಿ ವಾಚಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವೀರಮಂಗಲ ಪಿಎಂಶ್ರೀ ಶಾಲೆಯ 8 ಶಿಕ್ಷಕರು ಸೇರಿ 17 ಮಂದಿ ಉದ್ಯೋಗಿಗಳು ಇಲ್ಲಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪಿಎಂಶ್ರೀ ಶಾಲೆಯ ಅಭಿವೃದ್ಧಿಯಲ್ಲಿ ಸರಕಾರ, ಊರವರು, ಶಾಲಾ ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ, ಪೋಷಕರು ಮತ್ತು ದಾನಿಗಳ ಸಹಕಾರ ಸದಾ ದೊರೆತಿದೆ ಎಂದು ಹೇಳಿ, ಶಾಲೆಗೆ ಕೊಠಡಿ ವ್ಯವಸ್ಥೆ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ನರಿಮೊಗರು ಗ್ರಾ.ಪಂ, ಸದಸ್ಯೆ ಪದ್ಮಾವತಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಹರಿಣಿ ಸ್ವಾಗತಿಸಿ, ಶಿಕ್ಷಕಿ ಶೋಭಾ ವಂದಿಸಿದರು. ಶಿಕ್ಷಕಿ ಶಿಲ್ಪರಾಣಿ ಕಾರ್‍ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಸಹಬೋಜನ ಮತ್ತು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಉನ್ನತ ಶಿಕ್ಷಣ ಪಡೆಯಬೇಕು
ಕೋಲಾರ ಭಾಗದವರು ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಪಾಸು ಮಾಡಿ, ಉನ್ನತ ಉದ್ಯೋಗದತ್ತ ಹೋಗುತ್ತಾರೆ, ಅದೇ ರೀತಿ ನಮ್ಮ ಭಾಗದವರು ಕೂಡ, ಪ್ರಯತ್ನವನ್ನು ಮಾಡಬೇಕು. ಈ ನಿಟ್ಟಿನಲ್ಲಿ ವೀರಮಂಗಲ ಪಿಎಂಶ್ರೀ ಶಾಲೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಣ ನೀಡುತ್ತಿದೆ.
ಲೋಕೇಶ್ ಎಸ್.ಆರ್ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು
ಶಾಲೆಗೊಂದು ಗ್ರಂಥ ಭಂಡಾರ
ವೀರಮಂಗಲ ಶಾಲೆಯಲ್ಲಿ ಗ್ರಂಥ ಭಂಡಾರ ಆರಂಭವಾಗಿರುವುದು ತುಂಬಾ ಖುಷಿ ನೀಡಿದೆ. ಈ ಗ್ರಂಥ ಭಂಡಾರಕ್ಕೆ ಈ ದಿನ ಪೋಷಕರಿಂದ ಒಳ್ಳೆಯ ಪುಸ್ತುಕಗಳು ಕೊಡುಗೆ ದೊರೆತಿದೆ, ಗ್ರಂಥಲಾಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕೆಲಸವನ್ನು ಮಾಡಲಿದೆ
-ತಾರಾನಾಥ ಸವಣೂರು
ಮುಖ್ಯಗುರು ವೀರಮಂಗಲ ಪಿಎಂಶ್ರೀ ಶಾಲೆ