ಪುತ್ತೂರು: ಬಡಗನ್ನೂರು ಗ್ರಾಮದ ಪೆರಾಲು ಮನೋಜ್ ರೈ ಅವರ ಪತ್ನಿ ವಿಜಯಾ ರೈ(58ವ)ರವರು ನ.15 ರ ನಸುಕಿನ ಜಾವ ನಿಧನರಾದರು.
ಅಲ್ಪಕಾಲದ ಅಸೌಖ್ಯದಲ್ಲಿದ್ದ ವಿಜಯಾ ರೈ ಅವರು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಗಂಡ ಮನೋಜ್ ರೈ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಪುತ್ರಿಯನ್ನು ಅಗಲಿದ್ದಾರೆ.