ಪುತ್ತೂರು: ಕಳೆದ 6 ವರುಷಗಳಿಂದ ಇಲ್ಲಿನ ಅರುಣಾ ಕಲಾ ಮಂದಿರ ಬಳಿಯ ಪ್ರಭು ಸಂಕೀರ್ಣ ಇದರ ಎರಡನೇಯ ಮಳಿಗೆಯಲ್ಲಿ ವ್ಯವಹಾರಿಸುತ್ತಿದ್ದ ಸಿರಿ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ನ.14ರಂದು ಬೊಳುವಾರು ಬಳಿಯ ಹಿರಣ್ಯ ಸಂಕೀರ್ಣ ಇದರ ಮೊದಲ ಮಹಡಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಶ್ರೀ ಕೋಲ್ಪೆ ಷಣ್ಮುಖ ದೇವಸ್ಥಾನದ ಮಾಜಿ ಸಹಾಯಕ ಅರ್ಚಕ ಕೆ.ಎಂ.ತಿರುಮಲೇಶ್ವರ ಭಟ್ ಪೆಲತ್ತಿಂಜ ಇವರು ಧಾರ್ಮಿಕ ಕೈಂಕರ್ಯ ನೆರವೇರಿಸಿ , ದೀಪ ಪ್ರಜ್ವಲನೆ ಮೂಲಕ ಸಂಸ್ಥೆಯ ಶ್ರೆಯೋಭಿವೃದ್ದಿಗೆ ಹಾರೈಸಿದರು. ಹಿರಣ್ಯ ಕಾಂಪ್ಲೆಕ್ಸ್ ನ ಶಾಲಿವಾಹನ ತಿಲಕ್ ಭಟ್ , ಸಿರಿ ಸೌಹಾರ್ದ ಸಹಕಾರಿಯ ಮಾಜಿ ಅಧ್ಯಕ್ಷ ಶೀನಪ್ಪ ಪೂಜಾರಿ , ಅಧ್ಯಕ್ಷರಾದ ಪುರುಷೋತ್ತಮ ಕುಲಾಲ್, ಉಪಾಧ್ಯಕ್ಷ ಜನಾರ್ಧನ ಕುಲಾಲ್ , ನಿರ್ದೇಶಕರಾದ ಲೋಕೇಶ್ ಎಂ.ಎಚ್ , ವಸಂತ ಪೂಜಾರಿ, ಯುಸುಬು ಪಡೀಲ್,ಸೋಮನಾಥ ಶಾಂತಿನಗರ , ಗ್ರಾಹಕರಾದ ಬಾಲಕೃಷ್ಣ ಕುಲಾಲ್ ಮತ್ತು ಪಂಚಾಕ್ಷರಿ ಹಾಗೂ ಸಿಬ್ಬಂದಿಗಳಾದ ಕವಿತಾ ಎಂ ಮತ್ತು ಜಯಶ್ರೀ ರೈ ಮತ್ತು ಸಂದೇಶ್ ಕೆ ಹಾಜರಿದ್ದರು.
ಸಂಸ್ಥೆಯ ಸೇವೆಗಳು….
ವಾಹನ ಸಾಲ , ಪಿಗ್ಮಿ ಆಧಾರಿತ ಜಾಮೀನು ಸಾಲ ,ಸ್ವ ಸಹಾಯ ಸಂಘಗಳಿಗೆ ಸಾಲ , ಚಿನ್ನಾಭರಣ ಈಡಿನ ಸಾಲ , ಠೇವಣಿ ಆಧಾರಿತ ಸಾಲದ ಜೊತೆಗೆ ಉಳಿತಾಯ ಖಾತೆ ,ನಿರಖು ಠೇವಣಿ ,ಪಿಗ್ಮಿ ಠೇವಣಿ ,ಅವರ್ತನ ಠೇವಣಿ ,ಲಕ್ಷ್ಮೀ ನಿಧಿ ಠೇವಣಿ ಸಹಿತ ಪಾನ್ ಕಾರ್ಡು ಸೇವೆ ,ಸ್ವ ಸಹಾಯ ಗುಂಪು ರಚನೆ , ವಾಹನ ಹಾಗೂ ಆರೋಗ್ಯ ವಿಮಾ ಸೇವೆಯೂ ಕೂಡ ಸಹಕಾರಿಯಿಂದ ಲಭ್ಯವಿದ್ದು , ಗ್ರಾಹಕ ಜನತೆ ಇವೆಲ್ಲಾದರ ಉಪಯೋಗ ಪಡೆಯುವಂತೆ ಸಹಕಾರಿಯ ಅಧ್ಯಕ್ಷರಾದ ಪುರುಷೋತ್ತಮ ಕುಲಾಲ್ ವಿನಂತಿಸಿದ್ದಾರೆ.