ಪುತ್ತೂರು: ಕಲ್ಲಾರೆಯ ಪ್ಲಾಟ್ ನಿಂದ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಚಿಕಿತ್ಸೆಗೆ ಒಳಪಟ್ಟಿದ್ದ 17ರ ಹರೆಯದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದ್ವೀತಿಯ ಪಿ.ಯು.ಸಿ. ವಿದ್ಯಾರ್ಥಿನಿ ಫಾತಿಮತ್ ನಿಶ್ಮಾ ನ.17ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಫಾತಿಮತ್ ನಿಶ್ಮಾ ಅವರು ಪ್ರಸ್ತುತ ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಪುತ್ತೂರಿನ ಕಲ್ಲಾರೆಯ ಪ್ಲಾಟ್ ನಿವಾಸಿ ಹಾಗೂ ಪುತ್ತೂರಿನ ಕಮ್ಯೂನಿಟಿ ಸೆಂಟರ್ ನ ಸ್ಥಾಪಕ, ಆಕ್ರಂದನ ಸಾಕ್ಷ್ಯಚಿತ್ರ ನಿರ್ಮಿಸಿದ, Sunni Today ಬರಹಗಾರ ಹನೀಫ್ ಪುತ್ತೂರು ರವರ ಮಗಳು.
ಮೃತರು ತಂದೆ ಹನೀಫ್, ತಾಯಿ,ಸಂಬಂಧಿಕರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.