ಬೆಳ್ಳಿಪ್ಪಾಡಿ ಗ್ರಾಮ ಒಕ್ಕೂಟದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ
-ಸಂಸಾರಿಕ ಜೀವನಕ್ಕೆ ಹೆಚ್ಚು ಒತ್ತು ಕೊಟ್ಟು ಸಂಸ್ಕಾರಯುತ ಜೀವನ ನಡೆಸುವಂತಾಗಬೇಕು: ಸಂಜೀವ ಮಠಂದೂರು
-ಆದರ್ಶ ದಂಪತಿಗಳು ಯುವ ಪೀಳಿಗೆಗೆ ಮಾದರಿ: ಎ ವಿ ನಾರಾಯಣ್
-ಯಶಸ್ವಿ ದಾಂಪತ್ಯ ಜೀವನಕ್ಕೆ ಪ್ರೀತಿ, ತಾಳ್ಮೆ, ವಿಶ್ವಾಸ ಅತೀ ಅಗತ್ಯ: ಗೋಪಾಲಕೃಷ್ಣ ಪಟೇಲ್ ಚಾರ್ವಾಕ
-ದಶಮಾನೋತ್ಸವ ಅಂಗವಾಗಿ ವಿನೂತನ ಕಾರ್ಯಕ್ರಮ:ಡಿ ವಿ ಮನೋಹರ್
ಬೆಳ್ಳಿಪ್ಪಾಡಿ: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನ.19ರಂದು ಉಪ್ಪಿನಂಗಡಿ ವಲಯದ ಬೆಳ್ಳಿಪ್ಪಾಡಿ ಗ್ರಾಮ ಒಕ್ಕೂಟದ ಕಲ್ಲಾಜೆ ಜಿನ್ನಪ್ಪ ಗೌಡ ಇವರ ಮನೆಯಲ್ಲಿ 9 ದಂಪತಿಗಳ ಸನ್ಮಾನ ಮಾಡಲಾಯಿತು.
ಸಂಸಾರಿಕ ಜೀವನಕ್ಕೆ ಹೆಚ್ಚು ಒತ್ತುಕೊಟ್ಟು ಸಂಸ್ಕಾರಯುತ ಜೀವನ ನಡೆಸುವಂತಾಗಬೇಕು
ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು ಮಾತನಾಡಿ ಪ್ರಸ್ತುತವಾಗಿ ಸಮಾಜದಲ್ಲಿ ವಿವಾಹ ಕಾರ್ಯಕ್ಕೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದ್ದು, ಸಂಸಾರಿಕ ಜೀವನಕ್ಕೆ ಹೆಚ್ಚಿನ ಒತ್ತು ನೀಡಿ ಸಂಸ್ಕಾರಯುತ,ಸಾಮರಸ್ಯದೊಂದಿಗೆ ಸುಮಧುರ ಜೀವನ ನಡೆಸಬೇಕು ಎಂದರು.
ಆದರ್ಶ ದಂಪತಿಗಳು ಯುವ ಪೀಳಿಗೆಗೆ ಮಾದರಿ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರು, ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮದ ಗೌರವಾಧ್ಯಕ್ಷರಾದ ಎ ವಿ ನಾರಾಯಣ್ ಮಾತನಾಡಿ 50 ವರ್ಷಗಳ ಯಶಸ್ವಿ ದಾಂಪತ್ಯ ಜೀವನ ಪೂರೈಸಿದ ದಂಪತಿಗಳ ಜೀವನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದರು.
ಯಶಸ್ವಿ ದಾಂಪತ್ಯ ಜೀವನಕ್ಕೆ ಪ್ರೀತಿ, ತಾಳ್ಮೆ, ವಿಶ್ವಾಸ ಅತೀ ಅಗತ್ಯ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಚಾರ್ವಾಕ ಗೋಪಾಲಕೃಷ್ಣ ಪಟೇಲ್ ಮಾತನಾಡಿ ದಾಂಪತ್ಯ ಜೀವನದಲ್ಲಿ ಯಶಸ್ವಿ ಕಾಣಲು ಪರಸ್ಪರ ಪ್ರೀತಿ,ತಾಳ್ಮೆ,ವಿಶ್ವಾಸ ಇದ್ದಲ್ಲಿ ಒಗ್ಗಟ್ಟಿನಿಂದ ಸುಖಿ ಜೀವನ ನಡೆಸಲು ಸಾಧ್ಯ ಎಂದರು.
ದಶಮಾನೋತ್ಸವದ ಅಂಗವಾಗಿ ವಿನೂತನ ಕಾರ್ಯಕ್ರಮ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್ ಮಾತನಾಡಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ 50 ವರ್ಷ ಪೂರೈಸಿದ ದಂಪತಿಗಳನ್ನು ಸನ್ಮಾನಿಸುವ ವಿನೂತನ ಕಾರ್ಯಕ್ರಮವನ್ನು ಪುತ್ತೂರು , ವಿಟ್ಲ,ಕಡಬ ತಾಲೂಕು ಒಳಗೊಂಡ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ 78 ಗ್ರಾಮ ಒಕ್ಕೂಟಗಳಲ್ಲಿ 300 ಕ್ಕೂ ಅಧಿಕ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಿದ್ದು, ವಿವಾಹ ವಿಚ್ಛೇದನ ಕೇಳುವ ಕಾಲಘಟ್ಟದಲ್ಲಿ ಹಿರಿಯ ದಂಪತಿಗಳನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಮಾದರಿಯಾಬೇಕೆನ್ನುವುದು ಕಾರ್ಯಕ್ರಮದ ಉದ್ದೇಶ ಎಂದರು.
ಉಪ್ಪಿನಂಗಡಿ ವಲಯ ಒಕ್ಕೂಟದ ಅಧ್ಯಕ್ಷರಾದ ಗಂಗಯ್ಯ ಗೌಡ ಕನ್ನಡಾರು ಮಾತನಾಡಿದರು. ಬೆಳ್ಳಿಪ್ಪಾಡಿ ಗೌಡ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರೇಮಚಂದ್ರ ಗೌಡ ನೇಲಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಚಿಂತನ್ ಮಲುವೇಲು, ಮಹಿಳಾ ಘಟಕದ ಅಧ್ಯಕ್ಷೆ ನಮಿತಾ, ಮನೆಯವರಾದ ಜಿನ್ನಪ್ಪ ಗೌಡ ಕಲ್ಲಾಜೆ ಉಪಸ್ಥಿತರಿದ್ದರು. ಅತಿಥಿಗಳನ್ನು ರಾಮಣ್ಣ ಗೌಡ ಗುಂಡೋಳೆ, ದಯಾನಂದ ಕಲ್ಲಾಜೆ,ಜಯಾನಂದ ಅಂದ್ರಿಗೇರು, ಕರುಣಾಕರ ಕೈಲಾಜೆ, ಮೀನಾಕ್ಷಿ ಗುಂಡೋಳೆ, ಚೇತನಾ ಕೈಲಾಜೆ, ಜಲಜಾಕ್ಷಿ ದೇವಶ್ಯ, ಸಂಧ್ಯಾ ಕೈಲಾಜೆ, ಬೆಳಿಯಪ್ಪ ಗೌಡ ಅಂದ್ರಿಗೇರು, ರಾಮಚಂದ್ರ ಕೈಲಾಜೆ, ವೀಳ್ಯ ನೀಡಿ ಸ್ವಾಗತಿಸಿದರು.
ದುರ್ಗಾಶ್ರೀ ತಂಡದ ಸದಸ್ಯರು ಪ್ರಾರ್ಥಿಸಿದರು,ಒಕ್ಕೂಟ ಅಧ್ಯಕ್ಷರು ಚಿಂತನ್ ಮಲುವೇಲು ಸ್ವಾಗತಿಸಿದರು.ಜೊತೆ ಕಾರ್ಯದರ್ಶಿ ಚೇತನಾ ಕೈಲಾಜೆ ವಂದಿಸಿದರು, ಭವ್ಯ ಚಿಂತನ ವಾಚಿಸಿದರು. ಟ್ರಸ್ಟ್ ಮೇಲ್ವಿಚಾರಕಾರದ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಬೆಳ್ಳಿಪ್ಪಾಡಿ ಗ್ರಾಮದ 9 ಮಾದರಿ ದಂಪತಿಗಳಿಗೆ ಸನ್ಮಾನ
ಬೆಳ್ಳಿಪ್ಪಾಡಿ ಗ್ರಾಮದ ಕೂಟೇಲು ಶ್ರೀಮತಿ ಕಮಲ ಮತ್ತು ಶ್ರೀ ಕೇಶವ ಗೌಡ, ಕೂಟೇಲು ಶ್ರೀಮತಿ ಚೆನ್ನಮ್ಮ ಮತ್ತು ಶ್ರೀ ಕುಶಾಲಪ್ಪ ಗೌಡ, ದೇವಸ್ಯ ಶ್ರೀಮತಿ ಪಾರ್ವತಿ ಮತ್ತು ಶ್ರೀ ವೆಂಕಪ್ಪ ಗೌಡ,ನೇಲಡ್ಕ ಶ್ರೀಮತಿ ಯಮುನಾ ಮತ್ತು ಶ್ರೀ ಗಂಗಯ್ಯ ಗೌಡ, ಕೈಲಾಜೆ ಶ್ರೀಮತಿ ದೇವಕಿ ಮತ್ತು ಶ್ರೀ ಬಾಬು ಗೌಡ , ಕೈಲಾಜೆ ಶ್ರೀಮತಿ ಗಿರಿಜಾ ಮತ್ತು ಶ್ರೀ ದಾಮೋಧರ ಗೌಡ, ಉದ್ದಡ್ಕ ಶ್ರೀಮತಿ ಕಮಲ ಮತ್ತು ಶ್ರೀ ಅಣ್ಣು ಗೌಡ, ಅಲಿಂಜ ಶ್ರೀಮತಿ ಗಿರಿಜಾ ಮತ್ತು ಶ್ರೀ ಶೀನಪ್ಪ ಗೌಡ, ಅಂದ್ರಿಗೇರು ಶ್ರೀಮತಿ ಲೀಲಾವತಿ ಮತ್ತು ಶ್ರೀ ಬೆಳಿಯಪ್ಪ ಗೌಡ ದಂಪತಿಗಳಿಗೆ ಶಾಲು, ಹಾರ ಪೇಟ,ಸೀರೆ,ಹಣ್ಣುಹಂಪಲು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಶ್ರುತಿ ಕೂಟೇಲು,ಶುಭ ಕೈಲಾಜೆ, ಧನ್ಯಶ್ರೀ ಕಲ್ಲಾಜೆ, ಜಯಶ್ರೀ ನೇಲಡ್ಕ,ಕರುಣಾಕರ ಕೈಲಾಜೆ, ಚೇತನಾ ಕೈಲಾಜೆ, ಜಲಜಾಕ್ಷಿ ದೇವಶ್ಯ, ಕುಸುಮಧಾರ ಆಲಿಂಜ, ಸುಮಿತ್ರಾ ಅಂದ್ರಿಗೇರು ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು.