ಕೇಪುಳು ಜಂಕ್ಷನ್‌ನಲ್ಲಿ ವೇಗನಿಯಂತ್ರಣ ಅಳವಡಿಸುವಂತೆ ಕಲಿಯುಗ ಸೇವಾ ಸಮಿತಿಯಿಂದ ಮನವಿ

0

ಪುತ್ತೂರು: ಉಪ್ಪಿನಂಗಡಿ-ಪುತ್ತೂರು ಮುಖ್ಯರಸ್ತೆಯ ಕೇಪುಳು ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಇಲ್ಲಿ ವೇಗನಿಯಂತ್ರಣಕ್ಕೆ ಕ್ರಮಕೈಗೊಳ್ಳುಂತೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಪುತ್ತೂರು ನಗರಸಭೆ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಪುತ್ತೂರು ಸಂಚಾರಿ ಪೊಲೀಸ್ ಠಾಣಾ ಉಪ ನಿರೀಕ್ಷಕರಿಗೆ ಮನವಿ ನೀಡಲಾಗಿದೆ.

ಉರಮಾಲು, ಕೇಪುಳು ರಸ್ತೆಯಿಂದ ವೇಗವಾಗಿ ಬರುವ ವಾಹನಗಳು ಕೇಪುಳು ಜಂಕ್ಷನ್‌ನಲ್ಲಿ ಮುಖ್ಯರಸ್ತೆಯನ್ನು ಸೇರುತ್ತದೆ. ಉಪ್ಪಿನಂಗಡಿ-ಪುತ್ತೂರು ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಈ ಜಂಕ್ಷನ್‌ನಲ್ಲಿ ಅಪಘಾತಗಳು ಸಂಭವಿಸುತ್ತಿರುತ್ತದೆ. ಇದರಿಂದ ಸಂಚಾರ ನಿಯಮ ಪಾಲಿಸುತ್ತಿರುವ ವಾಹನಗಳೂ ಕೂಡ ತೊಂದರೆ ಪಡಬೇಕಾಗಿದೆ. ಉರಮಾಲು-ಕೇಪುಳು ರಸ್ತೆ ನಗರಸಭಾ ವ್ಯಾಪ್ತಿಗೆ ಸೇರಿದ್ದು ಇಲ್ಲಿ ಹಂಪ್ಸ್ ಅಳಡಿಸಬೇಕು ಹಾಗೂ ಪುತ್ತೂರು -ಉಪ್ಪಿನಂಗಡಿ ರಸ್ತೆಯ ಕೇಪುಳುವಿನಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here