ಪುತ್ತೂರು: ಇರ್ವತ್ತೂರಿನಲ್ಲಿ ಎಸ್.ಎಸ್.ಎಫ್ ಇರ್ವತ್ತೂರು ಯುನಿಟ್ ಮೂಲಕ ಊರಿನ ಹಲವಾರು ಪ್ರತಿಭೆಗಳನ್ನು ಗುರುತಿಸಿ ಪ್ರಪ್ರಥಮ ಬಾರಿಗೆ ಪ್ರತಿಭೆಗಳ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಉಮಾರ್ ಮದನಿ, ಗುರುಗಳಾದ ರಫೀಕ್ ಮದನಿ ಅಬೂಬಕ್ಕರ್ ಸಿದ್ದೀಕ್ ಸಖಾಫಿ ,ದಫ್ ಗುರು ಅಬ್ದುಲಾಕ, SYS ನ ಪ್ರಧಾನ ಅಧ್ಯಕ್ಷ ಮಹಮ್ಮದ್ ರಫೀಕ್ ಅಂಕರ್ಜಾಲ್, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ , ಬದ್ರಿಯಾ ಜುಮಾ ಮಸೀದಿಯ ಕೋಶಾಧಿಕಾರಿ ಮೊಹಮ್ಮದ್ ಅಝೀಝ್, ಕಲ್ಪನೆ ಮಸೀದಿಯ ಅಧ್ಯಕ್ಷ ಮೂಸಾಕ , ಯಂಗ್ ಮೆನ್ಸ್ ಅಸೋಸಿಯೇಷನ್ ಇರ್ವತ್ತೂರಿನ ಅಧ್ಯಕ್ಷರಾದ ಮುಹಮ್ಮದ್ ಹಾಫೀಳ್ , ಎಸ್ ಎಸ್ ಎಫ್ ಮಂಡತ್ಯಾರ್ ಸೆಕ್ಟರ್ ಕಾರ್ಯದರ್ಶಿ ಮುಹಮ್ಮದ್ ರಾಝಿಕ್ ಮಾಲಾಡಿ, ಮಾಜಿ ಅಧ್ಯಕ್ಷರಾದ ರಶೀದ್ ಮಾಲಾಡಿ ಉಪಸ್ಥಿತರಿದ್ದರು.
ಮುಹಮ್ಮದ್ ಅಲ್ಫಾಝ್, ಮುಹಮ್ಮದ್ ಫಝಲ್, ಮುಹಮ್ಮದ್ ಸುಹೈಬ್, ಮುಹಮ್ಮದ್ ಅಶ್ಹದ್ರ,ಇಬ್ರಾಹಿಂ ಮೇಸ್ತ್ರಿ ಸಹಕರಿಸಿದರು. ಕಾರ್ಯಕ್ರಮವನ್ನು SSF ಕಾರ್ಯದರ್ಶಿ ಮುಹಮ್ಮದ್ ಫಝಲ್ ಸ್ವಾಗತಿಸಿ, ನಿರೂಪಿಸಿದರು.