ಮಾಯ್ ದೆ ದೇವುಸ್ ಅನುದಾನಿತ ಹಿ.ಪ್ರಾ. ಶಾಲೆಗೆ ಕಥೋಲಿಕ್ ಶಿಕ್ಷಣ ಮಂಡಳಿ ಕಾರ್‍ಯದರ್ಶಿ ವಂ|ಡಾ| ಪ್ರವೀಣ್ ಲಿಯೋ ಲಸ್ರಾದೊರವರ ಅಧಿಕೃತ ಭೇಟಿ

0

ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್‍ಯದರ್ಶಿಯವರಾದ ವಂ| ಡಾ| ಪ್ರವೀಣ್ ಲಿಯೋ ಲಸ್ರಾದೊರವರು ಇತ್ತೀಚೆಗೆ ಮಾಯ್ ದೆ ದೇವುಸ್ ಅನುದಾನಿತ ಹಿ. ಪ್ರಾ. ಶಾಲೆಗೆ ಭೇಟಿ ನೀಡಿದರು. ಮೊದಲ ಬಾರಿ ಭೇಟಿ ನೀಡಿದ ಇವರನ್ನು ಬೇಂಡ್ ವಾದ್ಯದ ಮೂಲಕ ಬರಮಾಡಿಕೊಳ್ಳಲಾಯಿತು.

ಸಂಚಾಲಕರಾದ ಅ|ವಂ| ಲಾರೆನ್ಸ್ ಮಸ್ಕರೇನಸ್‌ರವರು ಕಾರ್‍ಯದರ್ಶಿಯವರ ಪರಿಚಯವನ್ನು ಶಿಕ್ಷಕರು ಹಾಗೂ ಮಕ್ಕಳಿಗೆ ಮಾಡಿಕೊಟ್ಟರು. ಅವರಿಗೆ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಗೌರವವನ್ನು ಸಮರ್ಪಿಸಿದರು. ವಂ| ಡಾ| ಪ್ರವೀಣ್ ಲಿಯೋ ಲಸ್ರಾದೊ ಮಕ್ಕಳನ್ನು ಉದ್ದೇಶಿಸಿ, ತಂದೆ-ತಾಯಿ, ಪೋಷಕರನ್ನು, ಶಿಕ್ಷಕರನ್ನು, ದೇಶವನ್ನು ಗೌರವಿಸಬೇಕು ಎಂಬ ಕಿವಿ ಮಾತನ್ನು ನೀಡಿದರು.


ಕಥೋಲಿಕ್ ಶಿಕ್ಷಣ ಮಂಡಳಿಯ ಕನ್ನಡ ಮಾಧ್ಯಮ ಅನುದಾನಿತ ಶಾಲೆಗಳಲ್ಲಿ ಅತೀ ಹೆಚ್ಚು ಮಕ್ಕಳ ಸಂಖ್ಯೆ ಇರುವ ಮಾಯ್ ದೆ ದೇವುಸ್ ಶಾಲೆಯು ಪ್ರತಿಯೊಂದು ವಿಷಯದಲ್ಲೂ ನಂಬರ್ ವನ್ ಶಾಲೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿ ಹೆತ್ತವರಿಗೆ ಕೃತಜ್ಞನೆ ಸಲ್ಲಿಸಿದರು. ಬಳಿಕ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ, ಮಕ್ಕಳಲ್ಲಿ ಮಾತನಾಡಿ ಕಲಿಕೆ, ಶಿಸ್ತು, ಸ್ವಚ್ಛತೆಯ ಬಗ್ಗೆ ಪ್ರಶಂಸೆಯನ್ನು ನೀಡಿ, ಶಿಕ್ಷಕರಿಗೂ ಅವರು ನೀಡುವ ಉತ್ತಮ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜ ಸ್ವಾಗತಿಸಿ, ಸಹಶಿಕ್ಷಕರಾದ ಸುಬ್ಬರಾಜ ಶಾಸ್ತ್ರಿ ಕಾರ್‍ಯಕ್ರಮ ನಿರೂಪಿಸಿ, ವಿಲ್ಮಾ ಡಿಸೋಜರವರು ವಂದಿಸಿದರು.

LEAVE A REPLY

Please enter your comment!
Please enter your name here