ಪುತ್ತೂರು: ಪಶುಪಾಲನಾ ಇಲಾಖೆ ಮಂಗಳೂರು,ಗೋ ಆಸ್ಪತ್ರೆ ಕೊಳ್ತಿಗೆ ಪೆರ್ಲಂಪಾಡಿ , ಗ್ರಾಮ ಪಂಚಾಯತ್ ಕೊಳ್ತಿಗೆ, ಹಾಗೂ ಗ್ರಾಮ ವಿಕಾಸ ಸಮಿತಿ ಕೊಳ್ತಿಗೆ ಮತ್ತು ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಇದರ ಸಂಯುಕ್ತ ಆಶ್ರಯದಲ್ಲಿ ನಮ್ಮ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನ.27ರಂದು ರೇಬಿಸ್ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಕೊಳ್ತಿಗೆ ಪಶು ವೈದ್ಯಾಧಿಕಾರಿ ಡಾ. ಪ್ರಕಾಶ್ ವಿದ್ಯಾರ್ಥಿಗಳಿಗೂ ಶಾಲೆಯ ಸಿಬ್ಬಂದಿ ವರ್ಗದವರಿಗೆ ಹುಚ್ಚು ನಾಯಿ ಕಡಿತದ ಕುರಿತು ವಿವರಿಸಿ ಅದರ ಕುರಿತು ವಿಚಾರ ಮಂಡನೆ ಮಾಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ ಎಸ್ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸಿಗುವ ಪಂಚಾಯತ್ ಸೌಲಭ್ಯಗಳನ್ನು ತಿಳಿಸಿದರು.ಶಿಕ್ಷಕರಾದ ನಂಜುಂಡಪ್ಪ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಕೃಷ್ಣವೇಣಿ ವಂದಿಸಿದರು.ನಳಿನಾಕ್ಷಿ ನಿರೂಪಿಸಿದರು.