ಸವಣೂರು ಅಗರಿ ಜಲಜಾಕ್ಷಿ ಅವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ನವೆಂಬರ್ 14 ರಂದು ನಿಧನರಾದ ಸವಣೂರು ಸಮೀಪದ ಅಗರಿಗುತ್ತು ದಿ. ಶೀನಪ್ಪ ಪೂಜಾರಿ ಅವರ ಪತ್ನಿ ಜಲಜಾಕ್ಷಿ ಅವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮಗಳ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.


ನುಡಿನಮನ ಸಲ್ಲಿಸಿದ ಚಿದಾನಂದ್ ಅವರು ಮಾತನಾಡಿ, ಜಲಜಾಕ್ಷಿ ಅವರು ಒಬ್ಬರು ಆದರ್ಶ ಗೃಹಿಣಿಯಾಗಿ ಬೆಳಗಿದರು. ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮೊಮ್ಮಕ್ಕಳು, ಬಂಧುಮಿತ್ರರ ಪಾಲಿಗೆ ಮಮತೆಯ ಮೂರ್ತಿಯಾಗಿ ತುಂಬು ಜೀವನ ನಡೆಸಿದ್ದಾರೆ. ಅವರ ಆದರ್ಶ ಜೀವನ ಇಡೀ ಮನೆತನಕ್ಕೆ ಮಾದರಿ ಎಂದರು.

ಈ ಸಂದರ್ಭದಲ್ಲಿ ಜ‌‌‌ಲಜಾಕ್ಷಿರವರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ನೂರಾರು ಬಂದು ಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here