ಪುತ್ತೂರು : ಕೆಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಧರ್ಮಪ್ರಾಂತ್ಯ ಪ್ರಸ್ತುತ ಪಡಿಸುವ , ಜ್ಯುವೆಲ್ಸ್ ಗ್ರೂಪ್ ಮತ್ತು ಆರೋಗ್ಯ ಆಯೋಗ ಪುತ್ತೂರು ಚರ್ಚ್ ಇದರ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವುಗಳ ಸಹಯೋಗದೊಂದಿಗೆ ಡಿ.1 ರಂದು ಮಾಯ್ ದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಯಲಿದೆ.
ತಪಾಸಣಾ ಶಿಬಿರವು ಬೆಳಗ್ಗೆ 8: 30 ರಿಂದ ಆರಂಭಗೊಂಡು ಮಧ್ಯಾಹ್ನ 2 ರ ತನಕ ನಡೆಯಲಿದೆಯೆಂದು ಆಯೋಜಕರು ತಿಳಿಸಿದ್ದು ,ಶಿಬಿರದಲ್ಲಿ ಸ್ತನ ಕ್ಯಾನ್ಸರ್ , ಮುಟ್ಟಿನ ಸಮಸ್ಯೆ , ಗುಣವಾಗದ ಹುಣ್ಣು , ಅಜೀರ್ಣ , ರಕ್ತ ಹೀನತೆ, ಮೂಳೆ ನೋವು , ರಕ್ತಸ್ರಾವ ಮುಂತಾದ ಸಮಸ್ಯೆಗೆ ಕಾರಣ ಹುಡುಕುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದ್ದು , ಶಿಬಿರದಲ್ಲಿ ಸ್ತ್ರೀಯರ ಆರೋಗ್ಯ ಮತ್ತು ಪುರುಷರ ಆರೋಗ್ಯ ತಪಾಸಣೆ ಪ್ರತ್ಯೇಕವಾಗಿಯೇ ನಡೆಸಲಾಗುವುದು ಮತ್ತು ತಜ್ಞರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಅವಕಾಶವಿದೆ.ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಎಲ್ಲರೂ ಪಡೆಯುವಂತೆ ಆಯೋಜಕರು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880083469 ಅಥವಾ 9164630622 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.