ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ:ದೋಲ್ಪಡಿ ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳಿಗೆ ಸನ್ಮಾನ

0

ದೋಲ್ಪಡಿ;ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ 50 ವರ್ಷ ಪೂರೈಸಿದ ಆದರ್ಶ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ದೋಲ್ಪಡಿ ಕುರೆಲು ಬನೆರಿ , ಲಿಂಗಪ್ಪ ಗೌಡರ ಮನೆಯಲ್ಲಿ ನ 27ರಂದು ನಡೆಯಿತು. ಕಾರ್ಯಕ್ರಮದಲ್ಲಿ ಗಂಗಮ್ಮ,ಹೊನ್ನಪ್ಪಗೌಡ ಕೂರೆಲು ಮನೆ ದೋಲ್ಪಡಿ, ಲೀಲಾವತಿ ಮತ್ತು ಶ್ರೀ.ಬಾಲಣ್ಣ ಗೌಡ ಕೂರೆಲು ಮನೆ ದೋಲ್ಪಡಿ ಗ್ರಾಮ, ಕಮಲ ಮತ್ತು ಬೆಳಿಯಪ್ಪ ಗೌಡ ಕೂರೆಲು ಮನೆ ದೋಲ್ಪಡಿ ಗ್ರಾಮ, ಹೊನ್ನಮ್ಮ ತಿಮಪ್ಪ ಗೌಡ ಮಳೆತಡಕ್ಕ ಮನೆ ದೋಲ್ಪಡಿ,ಶ್ರೀಮತಿ ಗುಲಾಬಿ ಶ್ರೀ ನಾರ್ನಪ್ಪ ಗೌಡ ಇದ್ಯಡಕ್ಕ ಮನೆ ದೋಲ್ಪಡಿ ಗ್ರಾಮ ಈ ದಂಪತಿಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದಸಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಮೇಲ್ವಿಚಾರಕ ವಿಜಯ್ ಕುಮಾರ್ ಹಾಗೂ ದೋಲ್ಪಡಿ ಒಕ್ಕೂಟದ ಅಧ್ಯಕ್ಷೆ ಸುಗಂಧಿ ಕೂರೆಲು, ನಿವೃತ್ತ ,ಶಿಕ್ಷಕರುಗಳಾದ ಜನಾರ್ದನ ಗೌಡ ಇಡ್ಯಾಡ್ಕ, ಅಚ್ಚುತ್ತ ಗೌಡ,ವೆಂಕಟ್ರಮಣ ಗೌಡ ಮರಕ್ಕಡ ಹಿರಿಯರಾದ ಹೋನಪ್ಪ ಗೌಡ ಕೂರೆಲು ಉಪಸ್ಥಿತರಿದ್ದರು.

ಪ್ರೇರಕ ಗಣೇಶ್ ಸ್ವಾಗತಿಸಿದರು , ವಿಜಯ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸುಗಂಧಿ ಕೂರೆಲು ವಂದಿಸಿದರು.

LEAVE A REPLY

Please enter your comment!
Please enter your name here