ಕೊಯಿಲ:ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕೊಯಿಲದಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳ ಸನ್ಮಾನ ಸಮಾರಂಭವು ನ 24 ರಂದು ಕೊಯಿಲದಲ್ಲಿ ಆತೂರು ಸದಾಶಿವ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ 10 ಮಾದರಿ ದಂಪತಿಗಳನ ಸನ್ಮಾನ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಮಾಳ ವಹಿಸಿದ್ದರು. ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷ ಡಿ.ವಿ ಮನೋಹರ್, ದಶಮಾನೋತ್ಸವ ಅಧ್ಯಕ್ಷ ಗೋಪಾಲ ಕೃಷ್ಣ ಪಟೇಲ್, ವಲಯ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಗೌಡ ಕುಂಟ್ಯಾನ, ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸ್ಪಂದನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಚೇತನ್ ಆನೆಗುಂಡಿ, ಒಕ್ಕಲಿಗ ಸಂಘದ ಗೌರವಾಧ್ಯಕ್ಷರಾದ ಭವಾನಿ ಶಂಕರ್ ಪರಂಗಾಜೆ, ಯುವ ಅಧ್ಯಕ್ಷ ಗಣೇಶ್ ಎರ್ಮಡ್ಕ, ವಲಯದ ಮಹಿಳಾ ಅಧ್ಯಕ್ಷರಾದ ಗೀತಾ ಮರಂಕಾಡಿ, ಗ್ರಾಮ ಸಮಿತಿ ಮಹಿಳಾ ಅಧ್ಯಕ್ಷರಾದ ಪ್ರೇಮಲತಾ ಪಲಡ್ಕ, ಸಬಳೂರು ಒಕ್ಕೂಟದ ಅಧ್ಯಕ್ಷರಾದ ವೇದಾವತಿ ಉಪಸ್ಥಿತರಿದ್ದರು. ಸನ್ಮಾನಿತರಾದ ಲಿಂಗಪ್ಪ ಗೌಡ ಕಡೆಂಬ್ಯಾಲ್ ಇವರು ತಮ್ಮ ಅನುಭವ ಹಂಚಿಕೊಂಡರು.
ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾ ಪರಂಗಾಜೆ ಮತ್ತು ಲಲಿತ ಸ್ವಾಗತಿಸಿದರು.