ವಿಟ್ಲ: ವಿಟ್ಲ ಕಸಬಾ ಮತ್ತು ವೀರಕಂಬ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವದ ಅಂಗವಾಗಿ ಒಕ್ಕಲಿಗ ಸ್ವಸಹಾಯ ಸಂಘಗಳು ಇರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರ ಸಲುವಾಗಿ ನವಂಬರ್ 28ರಂದು ವಿಟ್ಲದ ಅಕ್ಷಯ ಸಮುದಾಯ ಭವನದಲ್ಲಿ 11 ದಂಪತಿಗಳಿಗೆ ಸನ್ಮಾನ ಮಾಡಲಾಯಿತು.

ಶ್ರೀಮತಿ ಭಾಗೀರಥಿ ಮತ್ತು ಸೋಮಪ್ಪಗೌಡ ಒತ್ತೆಸಾರು ಮನೆ, ಶ್ರೀಮತಿ ಉಮಾವತಿ ಮತ್ತು ಪದ್ಮನಾಭ ಗೌಡ ಮಂಜಲಾಡಿ ಶ್ರೀಮತಿ ಸುಂದರಿ ಮತ್ತು ಬಟ್ಯ ಗೌಡ ಕೋಚೋಡಿ,ಶ್ರೀಮತಿ ಯಮುನಾ ಮತ್ತು ಗಂಗಾಧರ ಗೌಡ ಕೋಚೋಡಿ, ಶ್ರೀಮತಿ ಶೇಷಮ್ಮ ಮತ್ತು ಚೆನ್ನಪ್ಪ ಗೌಡ ನಾಯ್ತೊಟ್ಟು, ಶ್ರೀಮತಿ ಚೆನ್ನಮ್ಮ ಮತ್ತು ನಾರಾಯಣ ಗೌಡ ದೇವಸ್ಯ, ಶ್ರೀಮತಿ ವೀರಮ್ಮ ಮತ್ತು ಲಿಂಗಪ್ಪಗೌಡ ಮಾಮೇಶ್ವರ, ಶ್ರೀಮತಿ ಉಮ್ಮಕ್ಕ ಮತ್ತು ಡೊಂಬಯ್ಯ ಆವೆತ್ತಿಕಲ್ಲು , ಶ್ರೀಮತಿ ವೀರಮ್ಮ ಮತ್ತು ಅಣ್ಣು ಗೌಡ ಪಾದೆ, ಶ್ರೀಮತಿ ರಾಜೀವಿ ಮತ್ತು ವೆಂಕಪ್ಪಗೌಡ ನಂದನತ್ತಿಮಾರ್, ಶ್ರೀಮತಿ ಅಕ್ಕಣಿ ಮತ್ತು ಸಂಕಪ್ಪ ಗೌಡ ಕಂಪದ ಬೈಲು ದಂಪತಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ ವಿ ಮನೋಹರ ಗೌಡ, ವಿಟ್ಲ ಕಸಬಾದ ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷರಾದ ಸುನಂದ, ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕಾ, ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಬಂಟ್ವಾಳ ತಾಲೂಕಿನ ಅಧ್ಯಕ್ಷ ಸಿ. ಕೆ ಕುಶಾಲಪ್ಪ ಗೌಡ, ಬಂಟ್ವಾಳ ತಾಲೂಕಿನ ಮಹಿಳಾ ಸಂಘದ ಅಧ್ಯಕ್ಷ ಅಮಿತಾ , ವಿಟ್ಲ ವಲಯದ ಅಧ್ಯಕ್ಷರಾದ ಓಟೆ ನಾರಾಯಣ ಗೌಡ, ಬಂಟ್ವಾಳ ತಾಲೂಕಿನ ಯುವ ಸಂಘದ ಅಧ್ಯಕ್ಷರಾದ ದಿನೇಶ್ ಮಾಡ್ತೇಲು,ನಿಕಟ ಪೂರ್ವ ಅಧ್ಯಕ್ಷರಾದ ಲಿಂಗಪ್ಪಗೌಡ ಅಳಿಕೆ , ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಮೇಲ್ವಿಚಾರಕರಾದ ಸುಮಲತಾ , ಟ್ರಸ್ಟಿನ ಪ್ರೇರಕ ಜಯಶ್ರೀ ,ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ಸುಮಲತಾ ನಿರೂಪಿಸಿದರು.ಭವಾನಿಯವರು ಸ್ವಾಗತಿಸಿ. ಒಕ್ಕೂಟದ ಕಾರ್ಯದರ್ಶಿ ಕವಿತಾ ವಂದಿಸಿದರು.