ಕಾಣಿಯೂರು: ವಿವೇಕಾನಂದ ಕನ್ನಡ ಮಾಧ್ಯಮ ತೆಂಕಿಲ ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯ ಕ್ಲೇಮಾಡಲಿಂಗ್ ನಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ 4ನೇ ತರಗತಿ ವಿದ್ಯಾರ್ಥಿನಿ ಶೈವಿ ಎಂ ಎಸ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಕಡಬ ತಾಲೂಕಿನ ಕಾಯಿಮಣ ಗ್ರಾಮದ ಮರಕ್ಕಡ ಸುಧೀರ್ ಮತ್ತು ಲಿಕ್ಷಿತಾ ದಂಪತಿಗಳ ಪುತ್ರಿ.
ಹಿರಿಯ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ 6ನೇ ತರಗತಿಯ ವಿದ್ಯಾರ್ಥಿ ಧನುಷ್ ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಕಡಬ ತಾಲೂಕಿನ ಚಾರ್ವಕ ಕಾಸ್ಪಾಡಿ ಸತ್ಯನಾರಾಯಣ ಕಲ್ಲೂರಾಯ ಮತ್ತು ಕಲ್ಪನಾ ದಂಪತಿಗಳ ಪುತ್ರ.
ವಿಜೇತರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಮುಖ್ಯಗುರುಗಳು, ಶಿಕ್ಷಕ- ಶಿಕ್ಷಕೇತರ ವೃಂದದವರು ಅಭಿನಂದಿಸಿದರು. ಇವರಿಗೆ ಶಿಕ್ಷಕಿಯರಾದ ಧನ್ಯ ಎಂ ಕೆ ಮತ್ತು ಅನಿತಾ ಎಸ್ ರೈ ಮಾರ್ಗದರ್ಶನ ನೀಡಿದರು.
Home ಇತ್ತೀಚಿನ ಸುದ್ದಿಗಳು ತಾ.ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲಿಂಗ್ ನಲ್ಲಿ ಕಾಣಿಯೂರು ಪ್ರಗತಿಯ ಶೈವಿ ಎಂ...