ಪುತ್ತೂರು: ಅರಿಯಡ್ಕ ಗ್ರಾಮದ ಜಾರತ್ತಾರು ಮಹಾ ಮಾರಿಯಮ್ಮ ದೈವಸ್ಥಾನದ ಜೀರ್ಣೋದ್ದಾರಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ 5 ಲಕ್ಷ ರೂ ಅನುದಾನ ಮಂಜೂರುಗೊಂಡಿದ್ದು ಅನುದಾನ ಒದಗಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಮಹಾ ಮಾರಿಯಮ್ಮ ದೈವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ, ಕೋಶಾಧಿಕಾರಿ ಗಿರೀಶ್, ಸಮಿತಿಯ ರಮೇಶ್, ನಾರಾಯಣ, ಗುರುವಪ್ಪ ಮೊದಲಾದವರು ಉಪಸ್ಥಿತರಿದ್ದರು.