ಮಂಗಳೂರು: ಗ್ರಾಹಕನಿಗೆ ಕಳಪೆ ಗುಣಮಟ್ಟದ ಫರ್ನಿಚರ್ ತಯಾರಿಸಿ ಕೊಟ್ಟು ವಂಚಿಸಿದ ವಿಟ್ಲ ಸಮೀಪದ ಕಲ್ಲಂಗಲದ ಪ್ರೀತಿ ಫರ್ನಿಚರ್ ಮಾಲಕ ಸಂಜಯ್ ಕುಮಾರ್ ಎಂಬಾತನಿಗೆ 2೦,೦೦೦ ದಂಡ ವಿಧಿಸಿ ಮಂಗಳೂರಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ. ಕಲ್ಲಂಗಳ ನಿವಾಸಿ ಹೈದರ್ ಅಲಿ ಎಂಬವರು 5೦,೦೦೦ ರೂ ಮುಂಗಡ ನೀಡಿ ಉತ್ತಮ ಗುಣಮಟ್ಟದ ತೇಗದ ಮರದಿಂದ ಮನೆಗೆ ಪೀಠೋಪಕರಣವನ್ನು ತಯಾರಿಸಲು ಬೇಡಿಕೆ ಸಲ್ಲಿಸಿದ್ದರು. ನಿಗದಿತ ಸಮಯಕ್ಕೆ ಪೀಠೋಪರಕಣ ತಯಾರಿಸದೆ ಸತಾಯಿಸಿ ಕೊನೆಗೆ ಕಳಪೆ ಗುಣಮಟ್ಟದ ಪೀಠೋಪಕರಣಗಳನ್ನು ಪೂರೈಸಿದ ಬಗ್ಗೆ ಹೈದರ್ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ನ್ಯಾಯಾಲಯವು ವಿಚಾರಣೆ ನಡೆಸಿ ಮುಂಗಡ ಪಡೆದ ಹಣವನ್ನು ಗ್ರಾಹಕನಿಗೆ ಹಿಂದಿರುಗಿಸಿ ಪೀಠೋಪಕರಣವನ್ನು ಮರಳಿ ಪಡೆಯಲು ಆದೇಶ ನೀಡಿದೆ. ಸೇವೆಯಲ್ಲಿ ಕೊರತೆ ಮಾಡಿರುವುದಕ್ಕೆ ನಷ್ಟ ಪರಿಹಾರವಾಗಿ ರೂ. 20000 ಮತ್ತು ದಾವೆಯ ಖರ್ಚು ರೂ.10000 ವನ್ನು ಗ್ರಾಹಕನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.