ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಹಿತಿ ಕಾರ್ಯಕ್ರಮ

0

ಸಮಾಜಕ್ಕೆ ಹಲವು ಯೋಜನೆ: ಬಡವರ ಆಶಾಕಿರಣ: ಶಶಿಧರ್ ಎಂ.

ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಜನಪರ ಕಾರ್ಯಕ್ರಮಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಯವರು ನೀಡುತ್ತಿದ್ದು, ಬಡವರ ಪಾಲಿಗೆ ಆಶಾಕಿರಣವಾಗಿ ಹಲವು ಯೋಜನೆಗಳು ಕಾರ್ಯಗತಗೊಂಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ. ತಿಳಿಸಿದರು.

ಉಪ್ಪಿನಂಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವ ಸಹಾಯ ಗುಂಪುಗಳ ಮೂಲಕ ಜನರಿಗೆ ಸುಲಭವಾಗಿ ಬ್ಯಾಂಕ್ ಸಾಲವನ್ನು ಒದಗಿಸಲಾಗುತ್ತಿದ್ದು, ಬ್ಯಾಂಕಿನವರು ವಿಧಿಸುವ ಬಡ್ಡಿಯ ಹೊರತಾಗಿ ಬೇರಾವುದೇ ಬಡ್ಡಿಯನ್ನು ಇಲ್ಲಿ ವಿಧಿಸಲಾಗುತ್ತಿಲ್ಲ. ಮಾತ್ರವಲ್ಲದೆ ಬಡ್ಡಿಯು ಸರಳೀಕೃತ ಬಡ್ಡಿಯಾಗಿದ್ದು, ಕಂತು ಕಟ್ಟಿದ್ದಂತೆ ಬಡ್ಡಿಯೂ ಕಡಿಮೆಯಾಗುವುದರಿಂದ ಜನರ ಪಾಲಿಗೆ ಉಪಯುಕ್ತವೆನಿಸಿದೆ. ಸ್ವ ಸಹಾಯ ಸಂಘಗಳು ವ್ಯವಹಾರದಿಂದ ಗಳಿಸಿದ ಲಾಭಾಂಶವನ್ನೂ ಕೂಡಾ ಸಂಘಗಳಿಗೆಯೇ ಹಂಚುವ ಮೂಲಕ ಇಡೀ ಆರ್ಥಿಕ ವ್ಯವಹಾರವನ್ನು ಜನ ಸಾಮಾನ್ಯರ ಹಿತದೃಷ್ಠಿಯಿಂದಲೇ ನಡೆಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿ 6೦೦ ಕೋಟಿ ರೂಪಾಯಿ ಲಾಭಾಂಶ ಹಂಚಿಕೆಯನ್ನು ದೇಶದ ವಿತ್ತ ಸಚಿವೆಯಿಂದಲೇ ಇತ್ತೀಚೆಗೆ ನಡೆಸಲಾಗಿದೆ ಎಂದರು.


ಎಸೆಸ್ಸೆಲ್ಸಿ ಮಕ್ಕಳಿಗೆ ಟ್ಯೂಷನ್ , ವಿಕಲಾಂಗರಿಗೆ ವೀಲ್ಹ್ ಚೆಯರ್ ಸಹಿತ ನಡೆದಾಡುವ ಸಾಧನ, ಅಶಕ್ತ ವೃದ್ಧರಿಗೆ ಕಮಾಂಡ್ ಸಹಿತ ವೀಲ್ ಚೇಯರ್, ಏಕಾಂಗಿ ನಿರ್ಗತಿಕರಿಗೆ ಜೀವನ ಭದ್ರತೆ, ಬಡವರಿಗೆ ಮಾಶಾಸನ , ಸಾವಿರಾರು ಶಾಲೆಗಳಿಗೆ ಪೀಠೋಪಕರಣ, ಶಿಕ್ಷಕರನ್ನು ಒದಗಿಸುವುದು, ನಿರಂತರ ವಿದ್ಯಾರ್ಥಿ ವೇತನ ಸೌಲಭ್ಯ, ಹಲವಾರು ಸಂಘ ಸಂಸ್ಥೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಸಹಾಯ ಧನ ಮೊದಲಾದ ಜನೋಪಯೋಗಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ತನ್ಮೂಲಕ ಜನರ ಆರ್ಥಿಕ ಅಭಿವೃದ್ಧಿಗೂ ನೆರವಾಗಿ ಸಮಾಜದ ಸಂಕಷ್ಟಗಳಿಗೂ ನೆರವಾಗುತ್ತಾ ಜನರ ಸೇವೆಯ ಕಾರ್ಯ ಶ್ರೀ ಕ್ಷೇತ್ರದಿಂದ ನಡೆಯುತ್ತಿದೆ. ಮಾತ್ರವಲ್ಲದೆ ಯೋಜನೆಯ ಸೇವಾ ಕೇಂದ್ರಗಳಲ್ಲಿ ಸರಕಾರದ ಹಲವಾರು ಯೋಜನೆಗಳನ್ನು ಸೇವಾ ಶುಲ್ಕ ವಿಧಿಸದೆ ಜನರಿಗೆ ನೀಡುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಯೋಜನೆಯ ಮೇಲ್ವಿಚರಕರಾದ ಶಿವಪ್ಪ ಎಂ.ಕೆ. ಹಾಗೂ ಉಪ್ಪಿನಂಗಡಿ ವಲಯದ ಹಲವಾರು ಸೇವಾಪ್ರತಿನಿಧಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here