ಉಪ್ಪಿನಂಗಡಿ: ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ದುರ್ನಾತದ ಸಂಕಷ್ಟಕ್ಕೆ ತುತ್ತಾಗಿರುವ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಗುರುವಾರದಂದು ಭೇಟಿ ನೀಡಿ ಸಮಸ್ಯೆಯನ್ನು ನಿವಾರಿಸಲು ಸಂಬಂಧಿಸಿದ ಅಧಿಕಾರಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಿದರು.
ಹೆದ್ದಾರಿ ಅಗಲೀಕರಣದ ವೇಳೆ ಚರಂಡಿ ನಿರ್ಮಾಣ ಕಾರ್ಯದಲ್ಲಿನ ಲೋಪದಿಂದಾಗಿ ಈ ಸಮಸ್ಯೆ ಮೂಡಿದೆ ಎಂದು ಶಾಲಾಡಳಿತ ದೂರಿತ್ತ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ರವರು ಡಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ಹೊತ್ತು ಶಾಲಾ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್ , ಸದಸ್ಯರಾದ ಫಾರೂಕ್ ಜಿಂದಗಿ, ಕಲಂದರ್ ಶಾಫಿ, ಹಿರಿಯ ವಿದ್ಯಾರ್ಥಿ ಸಂಘದ ಅಬ್ದುಲ್ ರಹಿಮಾನ್ , ಪ್ರಮುಖರಾದ ಡಾ. ರಾಜಾರಾಮ ಕೆ.ಬಿ., ಪ್ರಶಾಂತ್ ಡಿಕೋಸ್ಟಾ, ನಾಗೇಶ್ ಪ್ರಭು, ಯು.ಟಿ. ಮಹಮ್ಮದ್ ತೌಷಿಫ್ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.