ಚರಂಡಿಗೆ ಬಿಳುವ ದೃಶ್ಯ ಸಿಸಿ ಟಿವಿಯಲ್ಲಿ ಬೆಳಕಿಗೆ !
ಪುತ್ತೂರು: ನಾಪತ್ತೆಯಾದ ಪಡ್ಡಾಯೂರು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದಕುಮಾರ್ (68.ವ) ಎಂಬವರ ಮೃತದೇಹ ಡಿ.6 ರಂದು ಬೆಳಗ್ಗೆ ರೋಟರಿಪುರ ಸಾಮೆತ್ತಡ್ಕ ನಡುವೆ ತೋಡಿನ ಬದಿಯಲ್ಲಿ ಪತ್ತೆಯಾಗಿದೆ.
ಆ ವ್ಯಕ್ತಿ ಡಿ.5 ರಂದು ಸಂಜೆ ಚರಂಡಿಯಲ್ಲಿ ಬೀಳುತ್ತಿರುವ ದೃಶ್ಯ ಬೊಳುವಾರು ಉರ್ಲಾಂಡಿ ರಸ್ತೆಯ ಮನೆಯೊಂದರ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಅಲ್ಲಿಂದ ನಂತರ ಏನಾಗಿದೆ? ಎಂಬುದು ಬೆಳಕಿಗೆ ಬಂದಿಲ್ಲ. ಇದು ಕೊಲೆಯೋ ಅಥವಾ ಮಳೆ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದಾರೋ ಅನುಮಾನ ಸೃಷ್ಟಿಯಾಗಿದೆ.
ನಂದಕುಮಾರ್ ಅವರು ಡಿ. 5ರಂದು ಮನೆಯಿಂದ ಪುತ್ತೂರು ಪೇಟೆಗೆ ಬಂದಿದ್ದರು. ಹಾಗೆ ಬರುವಾಗ ಸಂಬಂಧಿಕರೊಬ್ಬರಿಗೆ ಸುಮಾರು ರೂ.1 ಲಕ್ಷ ನಗದನ್ನು ನೀಡಲೆಂದು ಬಂದಿದ್ದರು. ಇದೀಗ ಅವರ ಮೃತದೇಹ ತೋಡಿನ ಬದಿಯಲ್ಲಿ ಪತ್ತೆಯಾಗಿದೆ. ಇದೊಂದು ಹಣಕ್ಕಾಗಿ ನಡೆದ ಕೊಲೆ ಆಗಿರಬಹುದೆಂದು ಹೇಳಲಾಗುತ್ತಿದೆಯಾದರೂ ನಂದಕುಮಾರ್ ಅವರು ಉರ್ಲಾಂಡಿ ರಸ್ತೆಯ ಬೊಳುವಾರಿನಲ್ಲಿ ಚರಂಡಿಗೆ ಬೀಳುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಹಾಗಾಗಿ ಅವರು ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.