ಪುತ್ತೂರು:ಬನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಅವರಿಗೆ ಸಿಡಿಲು ಬಡಿದು ಅಸ್ವಸ್ಥಗೊಂಡು ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯವನ್ನು ವಿಚಾರಿಸಲು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದರು.ಈ ಸಂದರ್ಭ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ನಾಗೇಶ್ ಕೆಡೆಂಜಿ, ನಾಗೇಂದ್ರ ಬಾಳಿಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪಿಡಿಒ ಚಿತ್ರಾವತಿ ಅವರಿಗೆ ಡಿ.5ರಂದು ಸಂಜೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು. ಗ್ರಾ.ಪಂ.ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ದುರ್ಘಟನೆ ನಡೆದಿದೆ.ಅವರು ಕಂಪ್ಯೂಟರ್ಗೆ ತಂಬ್ ನೀಡಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲಿನ ಅಘಾತವಾಗಿದೆ.ಪರಿಣಾಮ ತನ್ನ ಬಲಕಾಲಿನ ಶಕ್ತಿಯನ್ನು ಕಳೆದುಕೊಂಡು ಅಸ್ವಸ್ಥಗೊಂಡ ಪಿಡಿಒ ಚಿತ್ರಾವತಿ ಅವರನ್ನು ಗ್ರಾ.ಪಂ.ಕಚೇರಿಯಲ್ಲಿದ್ದ ಅಧ್ಯಕ್ಷರು ಹಾಗೂ ಸದಸ್ಯರಿಬ್ಬರು ಕಾರಲ್ಲಿ ಕರೆದೊಯ್ದು ಪುತ್ತೂರು ಮಹಾವೀರ ಅಸ್ಪತ್ರೆಗೆ ದಾಖಲಿಸಿದ್ದರು.ರಾತ್ರಿ ವೇಳೆ ಅವರ ಬಲಕಾಲಿಗೆ ಶಕ್ತಿ ಬಂದಿದ್ದು,ಚೇತರಿಸಿಕೊಂಡಿದ್ದಾರೆ .ಘಟನೆ ವೇಳೆ ಕಚೇರಿ ಕೆಲಸಕ್ಕಾಗಿ ಬಂದಿದ್ದ ಗ್ರಾಮಸ್ಥರು ಇದ್ದರಾದರೂ ಅವರು ಕಂಪ್ಯೂಟರ್ನಿಂದ ದೂರವಿದ್ದುದರಿಂದ ಯಾವುದೇ ತೊಂದರೆ ಸಂಭವಿಸಿಲ್ಲ.