ರಾಜ್ಯಮಟ್ಟದ 20ರ ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾಟ-ಫಿಲೋಮಿನಾದಲ್ಲಿ ತರಬೇತಿ ಶಿಬಿರ

0

ಪುತ್ತೂರು:ಕರ್ನಾಟಕ ರಾಜ್ಯ ಮಟ್ಟದ 20ರ ವಯೋಮಾನದ ಬಾಲಕರ ವಿಭಾಗದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವು ಡಿ.13 ರಿಂದ ಡಿ.15ರ ವರೆಗೆ ಕೋಲಾರ ಜಿಲ್ಲೆಯಲ್ಲಿ ನಡೆಯಲಿದೆ.


ಈ ಪಂದ್ಯಾಕೂಟದಲ್ಲಿ ದಕ್ಷಿಣ ಕನ್ನಡದ ಜಿಲ್ಲಾ ತಂಡ ಭಾಗವಹಿಸಲಿದ್ದು, ಈ ಆಟಗಾರರಿಗೆ ತರಬೇತಿ ಶಿಬಿರವನ್ನು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಡಿ.8 ರಿಂದ 11ರ ವರೆಗೆ ಆಯೋಜಿಸಲಾಗಿದೆ.

ಈ ಕಬಡ್ಡಿ ತರಬೇತಿ ಶಿಬಿರಕ್ಕೆ ಪ್ರಧಾನ ತರಬೇತುದಾರರಾಗಿ ಹಬೀಬ್ ಮಾಣಿರವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ತಾಲೂಕು ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಕೋಶಾಧಿಕಾರಿ ರಝಾಕ್ ಬಿ.ಎಚ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊ, ರೆಫ್ರೀ ಬೋರ್ಡ್ ಅಧ್ಯಕ್ಷ ಅಬ್ದುಲ್ ಆಸಿಫ್ ತುಂಬುತ್ತಡ್ಕ, ಪುರುಷೋತ್ತಮ್ ಕೋಲ್ಫೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here