ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಮತ್ತು ಬಲಿವಾಡು ಕೂಟ

0

ಉಪ್ಪಿನಂಗಡಿ: ಇಲ್ಲಿನ ಗ್ರಾಮ ದೇವಾಲಯವಾದ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕ್ರೋಧಿ ನಾಮ ಸಂವತ್ಸರದ ಮಾರ್ಗಶಿರ ಮಾಸ ಶುದ್ಧ ಷಷ್ಠಿಯಾದ ಡಿ.7ರ ಶನಿವಾರದಂದು ಷಷ್ಠಿ ಉತ್ಸವ ಮತ್ತು ಬಲಿವಾಡು ಕೂಟ ವಿಜೃಂಭಣೆಯಿಂದ ನಡೆಯಿತು.


ಷಷ್ಠಿಯ ಮೊದಲ ದಿನವಾದ ಶುಕ್ರವಾರದಂದು ರಾತ್ರಿ ಶ್ರೀ ದೇವಾಲಯದಲ್ಲಿ ಹೂವಿನ ಪೂಜೆ ನಡೆದು, ಅನ್ನಸಂತರ್ಪಣೆ ನಡೆಯಿತು. ಡಿ.7ರಂದು ಬೆಳಗ್ಗೆ ಉಷಃ ಪೂಜೆಯಾಗಿ ಬೆಳಗ್ಗಿನ ಪೂಜೆ, ನಾಗತಂಬಿಲ, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಸೇವೆ ನಡೆದು, ರಾತ್ರಿ ಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಇದರೊಂದಿಗೆ ಷಷ್ಠಿ ವೃತಾಚರಣೆಯೂ ನಡೆಯಿತು.


ನಂಬಿ ಬಂದ ಭಕ್ತರಿಗೆ ಸಂತಾನಭಾಗ್ಯ ಒದಗಿಸುವ ಪುಣ್ಯಕ್ಷೇತ್ರವೇಂದೇ ಪ್ರಸಿದ್ಧವಾದ ಶ್ರೀ ಪದಾಳ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಂಬರುವ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದೆ.


ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ಉದಯಶಂಕರ ಭಟ್ಟ, ಉಪಾಧ್ಯಕ್ಷರಾದ ಸುರೇಶ್ ಅತ್ರೆಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಖಜಾಂಚಿ ರಾಮಚಂದ್ರ ಮಣಿಯಾಣಿ, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ ಪೂಜಾರಿ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ಲಕ್ಷ್ಮಣ ಗೌಡ ನೆಡ್ಚಿಲು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪೆರಿಯಡ್ಕ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ, ಡಾ. ರಾಜಾರಾಮ್ ಕೆ.ಬಿ., ಪ್ರತಾಪ್ ಯು. ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಯ ಪದಾಧಿಕಾರಿಗಳಾದ ಸುನೀಲ್ ಕುಮಾರ್ ದಡ್ಡು, ಚಿದಾನಂದ ಪಂಚೇರು, ರಾಜೇಶ್ ಕೊಡಂಗೆ, ವಿದ್ಯಾಧರ ಜೈನ್, ಚಿನ್ಮಯ ಭಟ್ ಪದಾಳ, ಡಾ. ವಸಂತ ಕುಮಾರ ತಾಳ್ತಜೆ, ಗಿರೀಶ್ ಆರ್ತಿಲ, ವಿಶ್ವನಾಥ ಶೆಟ್ಟಿ ಅಮ್ಟೂರು ಬಾರಿಕೆ, ವಸಂತ ನಾಯ್ಕ ಬೊಳ್ಳಾವು, ಪದ್ಮನಾಭ ಬಲ್ಯಾರಬೆಟ್ಟು, ಪ್ರಶಾಂತ್ ಪೆರಿಯಡ್ಕ, ಪ್ರಸನ್ನ ಪೆರಿಯಡ್ಕ, ಹರಿಪ್ರಸಾದ್ ಕುವೆಚ್ಚಾರು, ಬಾಬು ಗೌಡ ನೆಡ್ಚಿಲ್, ಟೈಲರ್ ನಾರಾಯಣ ಭಟ್, ಹರಿಪ್ರಸಾದ್ ಬೊಳ್ಳಾವು, ರಾಮ ಭಟ್ ಬೊಳ್ಳಾವು, ದುರ್ಗಾಪ್ರಸಾದ್ ಬೊಳ್ಳಾವು, ಎನ್. ಉಮೇಶ್ ಶೆಣೈ, ಮಹಾಲಿಂಗೇಶ್ವರ ಭಟ್ ಬೊಳ್ಳಾವು, ರಾಧಾಕೃಷ್ಣ ಪೆರಿಯಡ್ಕ, ಕೃಷ್ಣಪ್ಪ ಗೌಡ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು, ಸೇಸಪ್ಪ ಗೌಡ ಬೊಳ್ಳಾವು, ಮಂಜುನಾಥ ಭಟ್ ಪೆರಿಯಡ್ಕ, ಶೀನಪ್ಪ ಗೌಡ ಬೊಳ್ಳಾವು, ವಿಜಯಲಕ್ಷ್ಮೀ ಪೆರಿಯಡ್ಕ, ಶ್ರಿಲತಾ ಪೆರಿಯಡ್ಕ, ಭವ್ಯ ಬೊಳ್ಳಾವು, ಕಮಲಾಕ್ಷಿ ಬೊಳ್ಳಾವು, ಸುಜಾತ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here