ಪುತ್ತೂರು: ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸರ್ವ ರೀತಿಯ ಅಲಂಕಾರವನ್ನು ಪೂರೈಸುತ್ತಾ ಬಂದಿರುವ ರಾಯಲ್ ಫ್ಲೋರಿಸ್ಟ್ ಆ್ಯಂಡ್ ಇವೆಂಟ್ಸ್ ಸಂಸ್ಥೆಯು ಕೋರ್ಟ್ ರಸ್ತೆಯ ಮಾಯಿದೆ ದೇವುಸ್ ಚರ್ಚ್ ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ಗ್ರಾಹಕರ ಉಪಯೋಗಕ್ಕೋಸ್ಕರ ಏಳ್ಮುಡಿಯಲ್ಲಿನ ಡೇನಿಯಲ್ ಆರ್ಕೇಡ್ನಲ್ಲಿ ಡಿ.9 ರಂದು ಸುಸಜ್ಜಿತವಾಗಿ ಲೋಕಾರ್ಪಣೆಗೊಳ್ಳುತ್ತಿದೆ.
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ನೂತನ ಶಾಖೆಯನ್ನು ಆಶೀರ್ವದಿಸಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಮದುವೆ ಡೆಕೋರೇಶನ್, ಬಲೂನ್ ಡೆಕೋರೇಶನ್, ಕಾರ್ ಡೆಕೋರೇಶನ್, ಹುಟ್ಟುಹಬ್ಬದ ಇವೆಂಟ್ಸ್, ಪುಷ್ಪಗುಚ್ಚಗಳು, ಹೂವುಗಳ ವ್ಯವಸ್ಥೆ, ಕೆಟರಿಂಗ್ ವ್ಯವಸ್ಥೆ, ಕಾರ್ಯಕ್ರಮದ ಸ್ಥಳ ನಿರ್ವಹಣೆ ಮುಂತಾದ ವ್ಯವಸ್ಥೆಗಳನ್ನು ಸಂಸ್ಥೆಯು ನಿರ್ವಹಿಸುತ್ತದೆ ಮಾತ್ರವಲ್ಲ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8197807116, 9482507116 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.