ಪುತ್ತೂರು:ನಾಲ್ಕು ವರ್ಷಗಳ ಹಿಂದೆ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮೊಬೈಲ್ ಫೋನ್ ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಕೆದಂಬಾಡಿ ಗ್ರಾಮದ ಪಿದಪಟ್ಲ ಆದ್ರಾಮ ಎಂಬವರ ಪತ್ನಿ ಸುಮಯ್ಯಾ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. 2020ರ ಸೆ.22ರಂದು ರಾತ್ರಿ ತಮ್ಮ ಮನೆಯ ಛಾವಣಿಯ ಹೆಂಚು ಸರಿಸಿ ಒಳನುಗ್ಗಿದ್ದ ನಿಡ್ಯಾಣದ ಮೊಹಮ್ಮದ್ ಅಶ್ರಫ್ ಎಂಬಾತ ನನ್ನ ಬೆಡ್ ರೂಂಗೆ ಬಂದು ತಲೆದಿಂಬಿನ ಅಡಿಯಲ್ಲಿದ್ದ ಸುಮಾರು 15 ಸಾವಿರ ರೂ.ಮೌಲ್ಯದ ಮೊಬೈಲ್ ಫೋನನ್ನು ಕಳವು ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿದೆ. ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ಲಾಡ್, ಮೋಹಿನಿ ವಾದಿಸಿದ್ದರು.