ಪುತ್ತೂರು: ಯೂನಿಯನ್ ಬ್ಯಾಂಕ್ ಇದರ ಗ್ರಾಹಕರಿಗೆ ಕೊಡುಗೆಯಾಗಿ ನೀಡುತ್ತಿರುವ ಯೂನಿಯನ್ ಸಮೃದ್ದಿ ಉಳಿತಾಯ ಬ್ಯಾಂಕ್ ಖಾತೆ ಮೂಲಕ ಪ್ರೀ ಕ್ಯಾನ್ಸರ್ ಕೇರ್ ಯೋಜನೆಯಡಿಯಲ್ಲಿ ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಕ್ಯಾನ್ಸರ್ ರೋಗಿಯಾಗಿರುವ ಮಹಿಳೆಯೊಬ್ಬರಿಗೆ ರೂ.5 ಲಕ್ಷ ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.
ಸುಳ್ಯ ತಾಲೂಕು ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಯೂನಿಯನ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಛೇರಿಯ ಗ್ರೇಸಿ ಲೋಬೊ, ಚೇತನ್ ಅರೋರಾ, ಸುಳ್ಯ ಗಾಂಧಿನಗರ ಶಾಖೆ ಪ್ರಂಬಧಕರಾದ ಅಶ್ವಿನಿ, ಸುಳ್ಯ ಮುಖ್ಯ ಶಾಖಾ ಪ್ರಂಬಧಕರಾದ ಅಜಯ್ ಕುಮಾರ್ ಉಪಸ್ಥಿತರಿದ್ದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಮ್ಮೆ ತನ್ನ ಯೂನಿಯನ್ ಸಮೃದ್ಧಿ ಉಳಿತಾಯ ಬ್ಯಾಂಕ್ ಖಾತೆ ಯೋಜನೆಯ ಮೂಲಕ ಗ್ರಾಹಕರ ಯೋಗಕ್ಷೇಮಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ವಿಶೇಷವಾಗಿ 18 ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಶಿಷ್ಟ ಯೋಜನೆಯು ಸ್ತನ, ಅಂಡಾಶಯ ಅಥವಾ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾದ ಮೇಲೆ ಯಾವುದೇ ಪ್ರೀಮಿಯಂ ಪಾವತಿಸದೆಯೇ ರೂ.5 ಲಕ್ಷ ಕ್ಯಾನ್ಸರ್ ಆರೈಕೆಯ ರಕ್ಷಣೆಯನ್ನು ನೀಡುತ್ತದೆ.
ಇತ್ತೀಚೆಗಷ್ಟೇ ಯೂನಿಯನ್ ಸಮೃದ್ಧಿ ಉಳಿತಾಯ ಬ್ಯಾಂಕ್ ಖಾತೆ ಯೋಜನೆಗೆ ದಾಖಲಾದ ಗ್ರಾಹಕರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದರೆ ಬ್ಯಾಂಕ್ ತಕ್ಷಣವೇ ಗ್ರಾಹಕರ ಕ್ಲೈಮ್‌ನ್ನು ಪ್ರಕ್ರಿಯೆಗೊಳಿಸಿ ಮತ್ತು ರೂ.5 ಲಕ್ಷ ಕವರೇಜ್ ಮೊತ್ತವನ್ನು ವಿತರಿಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.