





ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳು ಡಿಸೆಂಬರ್ 5ರಂದು ಇಂಡಿಯನ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಫೇರ್ರವರು ಮೂಡಬಿದ್ರೆಯ ಆಳ್ವಾಸ್ ಸೆಂಟ್ರಲ್ ಸ್ಕೂಲಲ್ಲಿ ನಡೆಸಿರುವ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮೆರೆದಿದ್ದಾರೆ.



6ನೇ ತರಗತಿಯ ದೀಪಾಂಶ್ ಶೆಟ್ಟಿ ಬಾದಾಮಿ ಎಲೆಯಿಂದ ಪ್ರಾಣಿಗಳ ಸೋಪು ತಯಾರಿಕಾ ಮಾದರಿಯನ್ನು ಪ್ರದರ್ಶಿಸಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರು ವಿಟ್ಲ ಸಮೀಪದ ವೀರ ಕಂಬದ ಮಹೇಶ್ ಜಿ ಶೆಟ್ಟಿ ಮತ್ತು ಸುಕನ್ಯಾ ಕೆ ಶೆಟ್ಟಿ ದಂಪತಿಗಳ ಪುತ್ರ.10ನೇ ತರಗತಿಯ ಮನಸ್ವಿತ್ ಭಂಡಾರಿ, ಗೋಡಂಬಿ ಸಿಪ್ಪೆಯನ್ನು ಇಂಧನವಾಗಿ ಉಪಯೋಗಿಸುವ ಸ್ಟವ್ ಮಾದರಿಯನ್ನು ಪ್ರಸ್ತುತಪಡಿಸಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರು ಪುತ್ತೂರಿನ ವಿಜಯ್ ಬಿ ಕೆ ಮತ್ತು ನಂದನ ರೈ ಕೆ ದಂಪತಿಗಳ ಪುತ್ರ. 10 ನೇ ತರಗತಿಯ ಸಾರಿಕಾ ಪೈ ಅವರು ಪ್ಯಾಕೇಜಿಂಗ್ಗೆ ಪರ್ಯಾಯ ವಸ್ತುವಾಗಿ ಲೂಫಾದ ಮಾದರಿಯನ್ನು ಪ್ರದರ್ಶಿಸಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರು ಪುತ್ತೂರಿನ ಸಂಜಯ್ ಮತ್ತು ಸಂಜನಾ ಪೈ ದಂಪತಿಗಳ ಪುತ್ರಿ.














