ಆಲಂಕಾರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಸಮಗ್ರ ಬೈಲಾ ತಿದ್ದುಪಡಿ ವಿಚಾರವಾಗಿ ಸರ್ವ ಸದಸ್ಯರ ವಿಶೇಷ ಸಭೆಯು ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ದೀನ ದಯಾಳು ರೈತ ಸಭಾಭವನದಲ್ಲಿ ಡಿ.8ರಂದು ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿಯವರು ಸ್ವಾಗತಿಸಿ, ಸಹಕಾರ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಬೆಳವಣಿಗೆಯನ್ನು ಕಂಡು ಬೈಲಾದಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಅನಿವಾರ್ಯತೆಯನ್ನು ಸಭೆಯ ಮುಂದಿಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಲಿಂಗಪ್ಪ ಪೂಜಾರಿಯವರು ವಿಶೇಷ ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿದರು. ತಿದ್ದುಪಡಿಯಾಗಲಿರುವ ಬೈಲಾದ ವಿವರಣೆಯನ್ನು ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿಯವರು ನೀಡಿದರು. ಸದಸ್ಯರು ನೂತನ ಬೈಲಾವನ್ನು ಸರ್ವಾನುಮತದಿಂದ ಅಂಗೀಕರಿಸಿದರು.
ಸಂಘದ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಸಂತೋಷ್ ಕುಮಾರ್ ಎಂ., ಗಂಗಾರತ್ನ ವಸಂತ್ ಅಗತ್ತಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಮಾಜಿ ನಿರ್ದೇಶಕರಾದ ಸಂಜೀವ ಪೂಜಾರಿ ಬಟ್ಲಡ್ಕ, ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಜಿನ್ನಪ್ಪ ಸಾಲ್ಯಾನ್ ಕಡಬ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಬಿ.ಎಲ್ ಜನಾರ್ದನ, ಸದಸ್ಯರಾದ ಕುಸುಮಾಧರ ಎನ್ಕಾಜೆ, ಅಶೋಕ್ ಕೊಯಿಲ, ಸಂತೋಷ್ ಕುಮಾರ್ ನೆಟ್ಟಣ, ಪುರುಷೋತ್ತಮ ಪೂಜಾರಿ ಬರೆಂಬೆಟ್ಟು, ಸಂಜೀವ ಪೂಜಾರಿ ನೈಲ, ಸುಂದರ ಕರ್ಕೇರ ಎಂ, ಮಾಯಿಲಪ್ಪ ಪೂಜಾರಿ ಕೊಂಬಾರು, ಗೀತಾ ಉಂಡಿಲ, ಪ್ರೇಮ ವಿದ್ಯಾನಗರ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಚಂದ್ರಹಾಸ ಪೂಜಾರಿ ಗೋವಿಂದ ಕಟ್ಟೆ, ಶ್ರೀಧರ ಪೂಜಾರಿ ಕಂಪ, ಮೋನಪ್ಪ ಪೂಜಾರಿ ಕೆಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಸ್ವಾತಿ ಮತ್ತು ಚೈತನ್ಯ ಪ್ರಾರ್ಥಿಸಿದರು. ನಿರ್ದೇಶಕರಾದ ಗಂಗಾರತ್ನ ವಸಂತ್ ಅಗತ್ತಾಡಿ ವಂದಿಸಿದರು. ನೆಟ್ಟಣ ಶಾಖಾ ವ್ಯವಸ್ಥಾಪಕ ಮಿಥುನ್ ಸುಂದರ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ರಂಜಿನಿ ಆರ್.ಕೆ., ರಕ್ಷಿತ್, ಶಿಲ್ಪಾ ಕೆ.ಎಸ್., ಶರ್ಮಿಳ, ಸಚಿನ್, ಕೀರ್ತನ್ ಕುಮಾರ್, ದೀಕ್ಷಿತ್, ಗೀತೇಶ್, ಅನಿಲ್ ಕುಮಾರ್, ಕೌಶಿಕ್ ಮತ್ತು ಪಿಗ್ಮಿ ಠೇವಣಿ ಸಂಗ್ರಾಹಕರಾದ ಎಸ್ ರಾಮಚಂದ್ರ ನೈಯ್ಯಲ್ಗ, ಎನ್.ಧನಂಜಯ ನೈಯ್ಯಲ್ಗ, ಶಶಿಧರ ಆರ್.ಕೆ., ಅಜಯ್ ಕುಮಾರ್ ಕೆ.ಆರ್, ರೋಹಿಣಿ, ಚರಣ್, ವಿನಿತಾ ವಿವಿಧ ಕಾರ್ಯಗಳಲ್ಲಿ ಸಹಕರಿಸಿದರು.