ಪುತ್ತೂರು :ಬುಡೋಕಾನ್ ಕರಾಟೆ ಇಂಟರ್ನಾಷನಲ್ ಇದರ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ 42ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುದಾನ ವಸತಿ ಶಾಲೆಯ ವಿದ್ಯಾರ್ಥಿ ಅಮೋಘ್. ಕೆ ಹುಡುಗರ 8ವರ್ಷ ವಯೋಮಿತಿಯ ಬ್ಲೂ/ಪರ್ಪಲ್ ಬೆಲ್ಟ್ ವಯಕ್ತಿಕ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರು ಪೋಳ್ಯ ನಿವಾಸಿ ವಿಷ್ಣು ಭಟ್ ಹಾಗು ಪ್ರೀತಿ ದಂಪತಿಗಳ ಪುತ್ರ. ಪುತ್ತೂರು ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ನ ರೆನ್ಶಿ. ಎಂ. ಸುರೇಶ್ ಅವರ ಶಿಷ್ಯ.