ಉಪ್ಪಿನಂಗಡಿ: ಇಲ್ಲಿನ ಕೈಲಾರು ವಾಸ್ತುಗಿಡ ಸನ್ನಿಧಿಗೆ ಬೆಂಗಳೂರಿನ ಸೋಲೂರು ಮಠದ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಭೇಟಿ ನೀಡಿ, ಕೈಲಾರು ರಾಜಗೋಪಾಲ ಭಟ್ ಅವರಿಂದ ವಾಸ್ತುಗಿಡವನ್ನು ಪಡೆದುಕೊಂಡರು.
ವಾಸ್ತು ಗಿಡ ಸನ್ನಿಧಿಗೆ ಭೇಟಿ ನೀಡಿದ ಶ್ರೀಗಳು, ಕೈಲಾರು ರಾಜಗೋಪಾಲ ಭಟ್ ಅವರು ಸುಮಾರು 20 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ನೀಡುತ್ತಿರುವ ವಾಸ್ತು ಗಿಡದ ಬಗ್ಗೆ ಹಾಗೂ ಇಲ್ಲಿಗೆ ಬಂದು ನೆಮ್ಮದಿಯ ಬದುಕು ಕಂಡುಕೊಂಡವರ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಜಿ., ವ್ಯವಸ್ಥಾಪಕ ಎಲ್ಯಣ್ಣ ಎಸ್., ಸಿಬ್ಬಂದಿ ಪ್ರದೀಪ್, ಮುರಳೀಧರ ಉಪಸ್ಥಿತರಿದ್ದರು.