ಕೊಣಾಲಿನ ಪ್ರಣಮ್ಯರವರ ’ಪುಟ್ಟ ಹೆಜ್ಜೆ’ ಕವನ ಸಂಕಲನಕ್ಕೆ ಧರ್ಮಸ್ಥಳ ಖಾವಂದರ ಮೆಚ್ಚುಗೆ

0

ನೆಲ್ಯಾಡಿ: ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಣಮ್ಯ ಅವರು ರಚಿಸಿದ ಚೊಚ್ಚಲ ಕವನ ಸಂಕಲನ “ಪುಟ್ಟಹೆಜ್ಜೆ” ಡಿ.11ರಂದು ಬಿಡುಗಡೆಗೊಂಡಿತು. ಈ ಕವನ ಸಂಕಲಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.


ಕವನ ಸಂಕಲನಕ್ಕೆ ಉಜಿರೆ ಎಸ್‌ಡಿಎಂ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ಸಹಾಯಕ ಅಧ್ಯಾಪಕ ದಿವಾ ಕೊಕ್ಕಡ ಅವರು ಮುನ್ನುಡಿ ಬರೆದಿದ್ದಾರೆ. ಈಕೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಚಾಮೆತ್ತಮೂಲೆ ತರವಾಡು ಮನೆಯ ಗಣೇಶ್ ನಾಯ್ಕ ಹಾಗೂ ವಿದ್ಯಾಲತಾ ಅವರ ಪುತ್ರಿ.

LEAVE A REPLY

Please enter your comment!
Please enter your name here