ಸವಣೂರು ಸ.ಪದವಿ ಪೂರ್ವ, ಫ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ” ಪ್ರತಿಭಾ ದಿನಾಚರಣೆ”

0

ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ- ಬಿ.ವಿ.ಸೂರ್‍ಯನಾರಾಯಣ



ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ, ಫ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ” ಪ್ರತಿಭಾ ದಿನಾಚರಣೆ” ಕಾರ್‍ಯಕ್ರಮ ದ. 13 ರಂದು ನಡೆಯಿತು.ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್‍ಯನಾರಾಯಣರವರು ದೀಪ ಬೆಳಗಿಸಿ, ಕಾರ್‍ಯಕ್ರಮ ಉದ್ಘಾಟಿಸಿ, ಮಾತನಾಡಿ ಸರಕಾರದ ಶಿಕ್ಷಣ ಸಂಸ್ಥೆಗಳಿಂದ ಸ್ವಾರ್ಥರಹಿತ ಸೇವೆಯನ್ನು ಶಿಕ್ಷಕರು ಮಾಡುತ್ತಿದ್ದಾರೆ, ಶಿಕ್ಷಣವೇ ಶಕ್ತಿಯಾಗಿದ್ದು, ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ ಅವರು ಸವಣೂರು ಸ.ಪ.ಪೂರ್ವಕಾಲೇಜ್ ಮತ್ತು ಫ್ರೌಡಶಾಲೆಯ ಸಾಧನೆಯನ್ನು ಕಂಡು ಹೃದಯ ತುಂಬಿ ಬಂದಿದೆ.

ಉತ್ತಮವಾದ ಹೆಸರು- ಗಂಗಾಧರ್ ರೈ
ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ, ಶಿಕ್ಷಣ ತಜ್ಞ ಪಿ.ಡಿ.ಗಂಗಾಧರ್ ರೈ ಮಾತನಾಡಿ ಸವಣೂರು ಪ್ರೌಢಶಾಲೆ ಮತ್ತು ಕಾಲೇಜ್ ವಿಭಾಗವು ಉತ್ತಮವಾದ ಹೆಸರನ್ನು ಪಡೆಯುತ್ತಿದೆ. ಸಂಸ್ಥೆಯ ಅಭಿವೃದ್ಧಿ ಸಮಿತಿಯ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯರವರು ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಉತ್ತಮ ಬೋಧಕವೃಂದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಇರುವುದು ತುಂಬಾ ಸಂತೋಷ ತಂದಿದೆ.

ಖುಷಿ ನೀಡಿದೆ- ರಾಕೇಶ್ ರೈ
ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ನಾವು ಕಲಿತ ನಮ್ಮ ಶಾಲೆಯ ಪ್ರಗತಿಯನ್ನು ಕಂಡು ತುಂಬಾ ಸಂತೋಷವಾಗಿದೆ, ಬಿ.ವಿ,ಸೂರ್‍ಯನಾರಾಯಣ ಅವರ ಬಹು ಶ್ರಮದಿಂದ ದಾನಿಗಳ ನೆರವು ಪಡೆದು ಕಟ್ಟಡ ನಿರ್ಮಿಸಿದ್ದಾರೆ, ಶಾಲೆಯ ಪ್ರಗತಿಯ ಪ್ರತಿ ಹೆಜ್ಜೆಯು ಅತ್ಯಂತ ಖುಷಿ ನೀಡಿದೆ ಎಂದರು.

ಅದ್ಭುತವಾಗಿ ಬೆಳೆದಿದೆ- ದಿನೇಶ್ ಮೆದು
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ ಸವಣೂರು ಪದವಿ ಪೂರ್ವ ಕಾಲೇಜ್ ಅದ್ಭುತವಾಗಿ ಬೆಳೆದು ನಿಂತಿರುವುದು ತುಂಬಾ ಸಂತೋಷ ತಂದಿದೆ ಎಂದರು.

ಮಾದರಿ ವಿದ್ಯಾಸಂಸ್ಥೆ- ಜಯಂತ್ ವೈ
ಸವಣೂರು ಕ್ಲಸ್ಟರ್ ಸಿಆರ್‌ಪಿ ಜಯಂತ್ ವೈಯವರು ಮಾತನಾಡಿ ಸವಣೂರು ಸ.ಪ.ಪೂರ್ವ ಕಾಲೇಜ್ ಮಾದರಿ ವಿದ್ಯಾಸಂಸ್ಥೆಯಾಗಿ ಬೆಳೆದುನಿಂತಿದೆ ಎಂದರು.

ಸಂತೋಷವಾಗಿದೆ-ರಫೀಕ್
ಸವಣೂರು ಗ್ರಾ.ಪಂ, ಸದಸ್ಯ ರಪೀಕ್ ಎಂ.ಎ ಮಾತನಾಡಿ ಈ ಶಾಲೆಯ ಪ್ರಗತಿಯನ್ನು ಕಂಡು ತುಂಬಾ ಸಂತೋಷವಾಗಿದೆ ಎಂದರು.

ಗಮನ ಹರಿಸಬೇಕು- ಗಿರಿಶಂಕರ್ ಸುಲಾಯ
ಸ.ಪ.ಪೂರ್ವ ಕಾಲೇಜಿನ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯರವರು ಮಾತನಾಡಿ ಸಂಸ್ಥೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಲಿಕ್ಕೆ ಇದೆ, ಪೋಷಕರು ಶಾಲೆಯ ಕಡೆಗೆ ಗಮನಹರಿಸಬೇಕು ಎಂದರು.

ಪ್ರತಿಭೆಯು ಮತ್ತಷ್ಟು ಬೆಳಗಲಿ- ಸುಂದರಿ
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಂಬಿಲರವರು ಮಾತನಾಡಿ ಈ ಶಾಲೆಯ ಅಭಿವೃದ್ಧಿಯನ್ನು ಕಂಡು ತುಂಬಾ ಸಂತೋಷವಾಗಿದೆ, ಇಲ್ಲಿನ ವಿದ್ಯಾರ್ಥಿಗಳ ಪ್ರತಿಭೆಯು ಮತ್ತಷ್ಟು ಬೆಳಗಲಿ ಎಂದು ಶುಭಹಾರೈಸಿದರು.


ಸವಣೂರು ಗ್ರಾ.ಪಂ, ಸದಸ್ಯರಾದ ರಾಜೀವಿ ಶೆಟ್ಟಿ, ಚಂದ್ರಾವತಿ, ಇಂದಿರಾ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ದ.ಕ,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಯುವಕ ಮಂಡಲದ ಕಾರ್‍ಯದರ್ಶಿ ಕೀರ್ತನ್ ಕೋಡಿಬೈಲು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಧಾಕೃಷ್ಣ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಪದ್ಮಾವತಿ ಎನ್.ಪಿರವರು ಕಾಲೇಜ್ ವಿಭಾಗದ ವರದಿ ವಾಚಿಸಿದರು. ಮುಖ್ಯಗುರು ರಘು ಪ್ರೌಢಶಾಲಾ ವಿಭಾಗದ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಾಮಚನ್ ಮತ್ತು ಕಾಲೇಜ್ ಹಾಗೂ ಪ್ರೌಢಶಾಲಾ ವಿಭಾಗದ ಉಪನ್ಯಾಸಕರು, ಅಧ್ಯಾಪಕರು ವಿವಿಧ ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ಉಪನ್ಯಾಸಕ ಹರಿಶಂಕರ್ ಸ್ವಾಗತಿಸಿ, ಕವಿತಾ ಸಿ.ಕೆ ವಂದಿಸಿದರು. ಉಪನ್ಯಾಸಕರಾದ ಕಿಶನ್ ಬಿ.ವಿ, ರಾಜೀವ ಶೆಟ್ಟಿ, ಜಯಶ್ರೀ, ದಿವ್ಯಾ ಕಾರ್‍ಯಕ್ರಮ ನಿರೂಪಿಸಿದರು. ಸವಣೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ನಿಂಗರಾಜು, ಉಪನ್ಯಾಸಕ ಶೋಭಾ ಹಾಗೂ ಸವಣೂರು ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷ ಶತ್ರುಂಜಯ ಅರಿಗ ಬೆಳಂದೂರುಗುತ್ತು ಅವರಿಗೆ ಹೂಗಚ್ಚ ನೀಡಿ, ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ದತ್ತಿನಿಧಿ, ಸ್ವರ್ಧೆಯ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಸಭಾ ಕಾರ್‍ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.

ಸವಣೂರಿಗೆ ಹಬ್ಬದ ವಾತಾವರಣ
ವಾರ್ಷಿಕೋತ್ಸವ ಸಮಾರಂಭವು ಅಚ್ಚುಕಟ್ಟಾಗಿ ನಡೆದಿದೆ. ಕಾರ್‍ಯಕ್ರಮದಲ್ಲಿ ಎಲ್ಲವೂ ಸಾಂಗವಾಗಿ ನಡೆದಿದೆ. ಸವಣೂರಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಮಾಡಿದೆ. ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಮೇಲಿನ ಅಭಿಮಾನವನ್ನು ಸದಾ ಹೊಂದಬೇಕು. ಬಹಳಷ್ಟು ಹಿರಿಯರ ಪ್ರಯತ್ನ ದಿಂದ ಇಲ್ಲಿ ಹೈಸ್ಕೂಲು, ಕಾಲೇಜ್ ಆಗಿದೆ. ನಿತ್ಯ ನಿರಂತರವಾಗಿ ನಾವು ಶಾಲೆಯ ಮೇಲೆ ಅಭಿಮಾನವನ್ನು ಹೊಂದಿರಬೇಕು
ಗಿರಿಶಂಕರ್ ಸುಲಾಯ ದೇವಶ್ಯ ಕಾರ್‍ಯಧ್ಯಕ್ಷರು
ಸ.ಪ.ಪೂರ್ವ ಕಾಲೇಜ್ ಸವಣೂರು

LEAVE A REPLY

Please enter your comment!
Please enter your name here