ವೇತನದಲ್ಲಿ ಕಡಿತ, ವೇತನ ಪಾವತಿ ವಿಳಂಬ ಖಂಡಿಸಿ ಇಂದಿನಿಂದ ಕೆಎಸ್‌ಆರ್‌ಟಿಸಿ ಹೊರಗುತ್ತಿಗೆ ಚಾಲಕರ ಅನಿರ್ಧಿಷ್ಟ ಮುಷ್ಕರ

0

ಪುತ್ತೂರು: ತಮಗೆ ಬರುವ ಅಲ್ಪ ವೇತನದಲ್ಲಿಯೂ ಕಡಿತ ಮಾಡುವುದಲ್ಲದೆ ವೇತನ ಪಾವತಿ ವಿಳಂಬ ಮಾಡುತ್ತಿರುವ ಗುತ್ತಿಗೆ ಸಂಸ್ಥೆಗಳ ಕ್ರಮವನ್ನು ವಿರೋಧಿಸಿ ಪುತ್ತೂರು ಕೆಎಸ್‌ಆರ್‌ಟಿಸಿಯ ಹೊರಗುತ್ತಿಗೆ ಚಾಲಕರು ಡಿ.15ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.ಇದರಿಂದಾಗಿ ಪ್ರಯಾಣಿಕರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಲ್ಲಿ ಹತ್ತು ಮಂದಿ ಚಾಲಕರು ಪನ್ನಗ ಮತ್ತು ಪೂಜಾಯ ಸೆಕ್ಯುರಿಟೀಸ್ ಎಂಬ ಸಂಸ್ಥೆಯ ಅಧೀನದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ತಮಗೆ ನೀಡುವ ವೇತನದಲ್ಲಿ ಪ್ರತಿ ತಿಂಗಳು ಒಬ್ಬೊಬ್ಬರಿಂದ ರೂ.3೦೦೦ರಿಂದ 5೦೦೦ ತನಕ ಕಡಿತ ಮಾಡುತ್ತಿದ್ದಾರೆ. ಕಡಿತ ಮಾಡದಂತೆ ಹಲವು ಬಾರಿ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ.ಕಡಿತ ಮಾಡಿದ ಮೊತ್ತವನ್ನು ಹಿಂತಿರುಗಿಸುವಂತೆ ತಿಳಿಸಲಾಗಿದೆ.ಆದರೆ ಮನವಿ ಮಾಡಿ ಹಲವು ತಿಂಗಳು ಕಳೆದರೂ ಹಿಂತಿರುಗಿಸಿರುವುದಿಲ್ಲ.ಹೀಗಾಗಿ ಡಿ.15ರಿಂದ ನಾವು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಲಿದ್ದೇವೆ. ಕೆಲವು ಚಾಲಕರು ಡಿ.13ರ ಸಂಜೆಯಿಂದಲೇ ಮುಷ್ಕರ ನಿರತರಾಗಿದ್ದು ಡಿ.14ರ ಸಂಜೆಯಿಂದ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರೆಲ್ಲರೂ ಮುಷ್ಕರ ನಡೆಸಲಿದ್ದೇವೆ. ನಮ್ಮ ವೇತನದಿಂದ ಕಡಿತ ಮಾಡಿದ ಮೊತ್ತವನ್ನು ನಮಗೆ ಹಿಂತಿರುಗಿಸುವ ತನಕ ಮುಷ್ಕರ ನಡೆಸಲಿದ್ದೇವೆ. ಹಿಂತಿರುಗಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ ಎಂದು ಹೊರಗುತ್ತಿಗೆ ಚಾಲಕ ಅಝೀಝ್ ತಿಳಿಸಿದ್ದಾರೆ. ಹೊರಗುತ್ತಿಗೆ ಚಾಲಕರ ಮುಷ್ಕರದಿಂದಾಗಿ ಕೆಲವೊಂದು ಮಾರ್ಗಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here