ಅರಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ 31ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆ.27ರಂದು ಶ್ರೀ ಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುರೋಹಿತರಾದ ಶಿವಪ್ರಸಾದ್ ಕಡಮಣ್ಣಾಯವರ ಪೌರೋಹಿತ್ಯದಲ್ಲಿ ನಡೆಯಲಿದೆ. ಪೂರ್ವಹ್ನ ಗಣೇಶ ವಿಗ್ರಹ ಪ್ರತಿಷ್ಠೆ, ನಾಗನ ಸನ್ನಿಧಿಯಲ್ಲಿ ತಂಬಿಲ ಸೇವೆ, ಭಜನೆ, ವಿವಿಧ ಸ್ಪರ್ಧೆಗಳು, ಧಾರ್ಮಿಕ ಉಪನ್ಯಾಸ, ಅನ್ನಸಂತರ್ಪಣೆ,ಸಂಜೆ ವಿವಿಧ ಕುಣಿತ ಭಜನೆ ತಂಡದೊಂದಿಗೆ ಶೋಭಾಯಾತ್ರೆ ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ಸಹಕಾರದೊಂದಿಗೆ ಪೂಜೆ ಗೊಂಡು, ಕ್ಷೀರ ಹೊಳೆಯಲ್ಲಿ ವಿಸರ್ಜನೆ ಮಾಡಲಾಗುವುದು. ಸಾರ್ವಜನಿಕ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.