ಕಾಣಿಯೂರು: ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಹಿರಿಯ ವಿದ್ಯಾರ್ಥಿಗಳ, ಪೋಷಕರ ಕೀಡಾಕೂಟವು ಡಿ.15ರಂದು ಬೊಬ್ಬೆಕೇರಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪೈಕ ಕರಿಮಜಲು ಗ್ರಾಮ ದೈವಸ್ಥಾನದ ಅನುವಂಶೀಯ ಮೊಕ್ತೇಸರ ಪುಟ್ಟಣ್ಣ ಗೌಡ ಪೈಕ ಉದ್ಘಾಟಿಸಿ ಶುಭಹಾರೈಸಿದರು. ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಅಲೆಕ್ಕಾಡಿ, ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿ ಅಧ್ಯಕ್ಷ ಮಧುಕರ್ ಬೇಂಗಡ್ಕ, ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹರೀಶ್ ಪೈಕ ಕಟೀಲು, ಅಬ್ಬಡ ಉತ್ಸಾಹಿ ಗೆಳೆಯರ ಬಳಗದ ಅಧ್ಯಕ್ಷ ಶರೀಪ್ ಅಬ್ಬಡ, ಶಾಲಾ ಮುಖ್ಯಗುರು ಶಶಿಕಲಾ, ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಮಾಜಿ ಅಧ್ಯಕ್ಷ ಸದಾನಂದ ಕಡೀರ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕೋಶಾಧಿಕಾರಿ ಸುಕುಮಾರ್ ಕಲ್ಪಡ, ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಶಾಲಾ ಶಿಕ್ಷಕ ಜನಾರ್ದನ ಹೇಮಳ , ದಿವ್ಯಾ, ಸುಶ್ಮಿತಾ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರುತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುರೇಖಾ ವಂದಿಸಿದರು.
ಶಾಲಾ ವಾರ್ಷಿಕೋತ್ಸವ ಆಮಂತ್ರಣ ಅನಾವರಣ: ಬೊಬ್ಬೆಕೇರಿ ಶಾಲಾ ವಾರ್ಷಿಕೋತ್ಸವವು ಡಿ.28ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣವನ್ನು ಗಣ್ಯರು ಅನಾವರಣಗೊಳಿಸಿದರು.