ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಬನ್ನೂರು, ಕಾರ್ಯದರ್ಶಿ ಪ್ರತಿಮಾ ಜಯರಾಮ ರೈ

0

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಿ ಜಿ.ಪಿ ಬನ್ನೂರು ಹಾಗೂ ಕಾರ್ಯದರ್ಶಿಯಾಗಿ ನ್ಯಾಯವಾದಿ ಪ್ರತಿಮಾ ಜಯರಾಮ ರೈ ನೇಮಕಗೊಂಡಿದ್ದಾರೆ.


ಶಾಸಕ ಅಶೋಕ್ ರೈಯವರ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ಶಿಪಾರಸ್ಸಿನಂತೆ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಾಲೆಂಟ್ ಪಿಂಟೋ ಈ ನೇಮಕ ಮಾಡಿದ್ದಾರೆ.


ವಿಶಾಲಾಕ್ಷಿ ಬನ್ನೂರು:
ನರಿಮೊಗರು ಗ್ರಾಮದ ನೆರಿಗೇರಿ ನಿವಾಸಿಯಾಗಿರುವ ವಿಶಾಲಾಕ್ಷಿ ಜಿ.ಪಿಯವರು ಬನ್ನೂರು ಗ್ರಾ.ಪಂನ ಪ್ರಥಮ ಉಪಾಧ್ಯಕ್ಷೆಯಾಗಿದ್ದಾರೆ. ನಂತರ ಅಧ್ಯಕ್ಷೆ, ಸದಸ್ಯೆಯಾಗಿ, ಪಿಎಲ್‌ಡಿ ಬ್ಯಾಂಕ್‌ನ ನಾಮನಿರ್ದೇಶಿತ ಸದಸ್ಯೆಯಗಿ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ, ಸಂಚಾಲಕಿಯಾಗಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಇರುವ ಇದೀಗ ಎರಡನೇ ಬಾರಿಗೆ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.


ಪ್ರತಿಮಾ ಜಯರಾಮ ರೈ:
ಸರ್ವೆ ಗ್ರಾಮದ ಬೊಟ್ಯಾಡಿ ಮೇಗಿನಗುತ್ತು ಪ್ರತಿಮಾ ಜಯರಾಮ ರೈಯವರು ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುತ್ತಾರೆ. ಇವರು ಪುತ್ತೂರಿನಲ್ಲಿ ಯುವ ನ್ಯಾಯವಾದಿಯಾಗಿದ್ದಾರೆ.

LEAVE A REPLY

Please enter your comment!
Please enter your name here