ಅಧ್ಯಕ್ಷರಾಗಿ ಅಣ್ಣಿ ಪೂಜಾರಿ,ಕಾರ್ಯದರ್ಶಿಯಾಗಿ ಶರತ್ ಸಾಲ್ಯಾನ್,ಕೋಶಾಧಿಕಾರಿಯಾಗಿ ದೀಕ್ಷಿತ್
ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ 2024-25ರ ಸಾಲಿನ ನೂತನ ಪದಾದಿಕಾರಿಗಳ ಆಯ್ಕೆ ಪ್ರಕ್ರಿಯೆ ಪುತ್ತೂರು ಬಿಲ್ಲವ ಸಂಘದ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು, ಕಾರ್ಯದರ್ಶಿಯಾಗಿ ಶರತ್ ಸಾಲ್ಯಾನ್ ಕೈಪಂಗಳದೋಳ, ಕೋಶಾಧಿಕಾರಿಯಾಗಿ ದೀಕ್ಷಿತ್ ಇರ್ದೆ, ಉಪಾಧ್ಯಕ್ಷರಾಗಿ ಸಮಿತ್ ಪಿ ಪರ್ಪುಂಜ, ಜೊತೆ ಕಾರ್ಯದರ್ಶಿ ಅಭಿಷೇಕ್ ಕೋಟ್ಯಾನ್ ಪುತ್ತೂರು, ಕ್ರೀಡಾ ನಿರ್ದೇಶಕರಾಗಿ ಗೌತಮ್ರಾಜ್ ಸರ್ವೆ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಭವಿತ್, ಆರೋಗ್ಯ ನಿರ್ದೇಶಕರಾಗಿ ಸತೀಶ್ ಎಚ್ ಹಿಂದಾರು, ಸಮಾಜ ಸೇವಾ ನಿರ್ದೇಶಕರಾಗಿ ಯತೀಶ್ ಬಲ್ನಾಡು, ಕಲೆ ಮತ್ತು ಸಾಹಿತ್ಯ ನಿರ್ದೆಶಕರಾಗಿ ಪ್ರಿಯಾಶ್ರೀ ಎಚ್ ವೀರಮಂಗಲ, ಸಾಂಸ್ಕೃತಿಕ ನಿರ್ದೇಶಕರಾಗಿ ಮೋಹನ್ ಶಿಬಿರ, ಉದ್ಯೋಗ ಮತ್ತು ಭವಿಷ್ಯ ನಿರ್ದೇಶಕರಾಗಿ ಲೋಹಿತ್ ಕಲ್ಕಾರ್, ನಾರಾಯಣಗುರು ತತ್ವ, ಆದರ್ಶ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾಗಿ ಅವಿನಾಶ್ ಹಾರಾಡಿ, ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾಗಿ ರವಿ ಕಲ್ಕಾರ್, ಪ್ರಚಾರ ಸಮಿತಿ ನಿರ್ದೇಶಕರಾಗಿ ಶಿವಪ್ರಸಾದ್ ಕುಂಬ್ರ, ಮಹಿಳಾ ಸಂಘಟನೆ ನಿರ್ದೇಶಕರಾಗಿ ರಕ್ಷಾ ಸೇಡಿಯಾಪು, ಸಂಘಟನಾ ಕಾರ್ಯದರ್ಶಿಗಳಾಗಿ ಕಿರಣ್ ಸರ್ವೆದೋಳ, ಮನಸ್ಮಿತಾ ಬಲ್ನಾಡು, ಜೀವನ್ ಡಿ, ದೀಕ್ಷಾ ಕೈಪಂಗಳದೋಳ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಭವಿತ್, ,ವಿದ್ಯಾ ನಿಧಿ ನಿರ್ದೇಶಕರಾಗಿ ಗಣೇಶ್ ಬೊಳ್ಳಗುಡ್ಡೆರವರು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಉಮೇಶ್ ಬಾಯಾರುರವರು ಹಾಗೂ ಚುನಾವಣಾ ಸಮಿತಿ ಸದಸ್ಯರುಗಳಾದ ಬಾಬು ಪೂಜಾರಿ ಇದ್ಪಾಡಿ, ಅನೂಪ್ ಕುಮಾರ್ ಎಸ್ ಕೂಡುರಸ್ತೆ, ಉದಯಕುಮಾರ್ ಕೋಲಾಡಿ, ನಿಕಟಪೂರ್ವ ಅಧ್ಯಕ್ಷ ಜಯರಾಮ ಬಿ.ಎನ್ ಕೆಮ್ಮಿಂಜೆರವರು ಚುನಾವಣೆಯನ್ನು ನಡೆಸಿಕೊಟ್ಟರು. ನಿಕಟಪೂರ್ವ ಕಾರ್ಯದರ್ಶಿ ಸಮಿತ್ ಪಿ.ರವರು ವರದಿ ಮಂಡಿಸಿದರು. ನಿಕಟಪೂರ್ವ ಕೋಶಾಧಿಕಾರಿ ಶರತ್ ಸಾಲ್ಯಾನ್ ಲೆಕ್ಕಪತ್ರ ಮಂಡಿಸಿದರು. ನಿಕಟಪೂರ್ವ ಉಪಾಧ್ಯಕ್ಷ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು ವಂದಿಸಿದರು.