ಪುತ್ತೂರು: ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಇದರ ಆಯೋಜನೆಯಲ್ಲಿ ಡಿ.5ರಿಂದ 8ರವರೆಗೆ ಬೆಂಗಳೂರಿನ ಬಸವನಗುಡಿ ಅಕ್ವೆಟಿಕ್ ಸೆಂಟರ್ ನಲ್ಲಿ ನಡೆದ 23ನೇ ರಾಜ್ಯ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಪ್ರಥಮ ವಿಜ್ಞಾನ ವಿಭಾಗದ ಅನ್ವಿತ್ ರೈ ಬರಿಕೆ 50ಮೀ ಫ್ರೀ ಸ್ಟೈಲ್ ಮತ್ತು 4×50ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಎರಡು ಬೆಳ್ಳಿ ಹಾಗೂ 50ಮೀ ಫ್ಲೈ, 100ಮೀ ಫ್ರೀ ಸ್ಟೈಲ್, 25ಮೀ ಫ್ರೀ ಸ್ಟೈಲ್ ಮತ್ತು 4×50ಮೀ ಮೆಡ್ಲೆ ರಿಲೇಯಲ್ಲಿ 4 ಕಂಚಿನ ಪದಕವನ್ನು, ದಿಗಂತ್ ವಿ ಎಸ್ ಮತ್ತು ಆರ್ ಅಮನ್ ರಾಜ್ ಇವರು 4×50ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಒಂದು ಬೆಳ್ಳಿ ಮತ್ತು 4×50ಮೀ ಮೆಡ್ಲೆ ರಿಲೇಯಲ್ಲಿ ಒಂದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ಅನ್ವಿತ್ ರೈ ಬರಿಕೆ ಮತ್ತು ಆರ್ ಅಮನ್ ರಾಜ್ ಡಿ.27ರಿಂದ 29 ರವರೆಗೆ ಸಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇದರ ಆಯೋಜನೆಯಲ್ಲಿ ವಿಜಯವಾಡದಲ್ಲಿ ನಡೆಯಲಿರುವ ಸೌತ್ ಜೋನ್ ಅಕ್ವೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರುಗಳಿಗೆ ಪರ್ಲಡ್ಕದ ಬಾಲವನದ ಅಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ದೀಕ್ಷಿತ್ ರಾವ್ ಮತ್ತು ರೋಹಿತ್ ಪ್ರಕಾಶ್ ರವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.