ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ: ಕುಂಬ್ರ ವಲಯದ ಮಾದರಿ ದಂಪತಿಗಳಿಗೆ ಸನ್ಮಾನ

0


ಕಾವು :ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕುಂಬ್ರ ವಲಯದ ಎಲ್ಲಾ ಒಕ್ಕೂಟದ ಮಾದರಿ ದಂಪತಿಗಳ ಸನ್ಮಾನ ಕಾರ್ಯಕ್ರಮ ಡಿ.14ರಂದು ಕಾವು ಹೊಸಮನೆ ಕೆ ಸಿ ಚಂದ್ರಶೇಖರ ಗೌಡರ ‘ಸಮಾಚಾರ ಶ್ರೀನಿವಾಸ’ ನಿವಾಸದಲ್ಲಿ ನಡೆಯಿತು.


ಆದರ್ಶ ದಂಪತಿಗಳು ಇಂದಿನ ಯುವ ಪೀಳಿಗೆಗೆ ಮಾದರಿ-ಗೋಪಾಲಕೃಷ್ಣ ಪಟೇಲ್ ಚಾರ್ವಾಕ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಮಾತನಾಡಿ ಪ್ರಸ್ತುತವಾಗಿ ನಡೆಯುವ ಯುವ ವಿವಾಹಿತ ದಂಪತಿಗಳ ವಿಚ್ಚೇದನ, ವೈಮನಸ್ಸು ನಡೆಯುವ ಈ ಕಾಲದಲ್ಲಿ 50 ವರ್ಷಗಳ ಯಶಸ್ವಿ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದರು.


ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಮೂಲಕ ಸದಸ್ಯರ ಸ್ವಾವಲಂಬಿ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ಡಿ ವಿ ಮನೋಹರ್
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ ವಿ ಮನೋಹರ್ ಮಾತನಾಡಿ ಪುತ್ತೂರು,ಸುಳ್ಯ,ಕಡಬ ತಾಲೂಕಿನಾದ್ಯಂತ ಒಂದು ಸಾವಿರಕ್ಕೂ ಮಿಕ್ಕಿ ಸ್ವ ಸಹಾಯ ಟ್ರಸ್ಟ್ ರಚಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡುವ ಜೊತೆಗೆ ಸ್ವ ಸಹಾಯ ಸಂಘ ಮೂಲಕ ಸಾಲ ನೀಡಿ ಸದಸ್ಯರ ಸ್ವಾವಲಂಬಿಯನ್ನಾಗಿಸುವುದು, ಕೌಶಲ್ಯಾಭಿವೃದ್ಧಿ ಮಾಡಿ ಸಮಾಜದಲ್ಲಿ ನಾಯಕತ್ವ ಗುಣವನ್ನು ಮೂಡಿಸುವುದು ಸ್ವ ಸಹಾಯ ಟ್ರಸ್ಟ್ ಉದ್ದೇಶ ಎಂದರು.


ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದು ಹೆತ್ತವರ ಜವಾಬ್ದಾರಿ-ನಾಗಪ್ಪ ಗೌಡ ಬೊಮ್ಮೆಟ್ಟಿ
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪೂರ್ವ ಅಧ್ಯಕ್ಷರಾದ ನಾಗಪ್ಪ ಗೌಡಕ್ ಬೊಮ್ಮೆಟ್ಟಿ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಹೆತ್ತವರು ಸಂಸ್ಕೃತಿ, ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಸಂಸ್ಕಾರಯುತ ವ್ಯಕ್ತಿಯನ್ನಾಗಿಸಿ ಜೀವನ ನಡೆಸುವಂತಾಗಿಸುವುದು ಹೆತ್ತವರ ಜವಾಬ್ದಾರಿ ಎಂದರು.


ವಲಯದಲ್ಲಿ ಸ್ವ ಸಹಾಯ ಒಕ್ಕೂಟದ ಮೂಲಕ ಸಮಾಜಮುಖಿ ಕಾರ್ಯ-ಲೋಕೇಶ್ ಚಾಕೋಟೆ
ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಕುಂಬ್ರ ವಲಯದ ಅಧ್ಯಕ್ಷ ಲೋಕೇಶ್ ಚಾಕೋಟೆ ಮಾತನಾಡಿ ತಾಲೂಕಿನಲ್ಲಿ ಪ್ರಥಮವಾಗಿಯೇ ವಲಯ ಒಕ್ಕೂಟವನ್ನು ರಚಿಸಿಕೊಂಡು ಒಕ್ಕೂಟಗಳ ಮುಖಾಂತರ ಆರೋಗ್ಯ ತಪಾಸಣಾ ಶಿಬಿರ ರಕ್ತದಾನ ಶಿಬಿರ, ಆಶಕ್ತ ಕುಟುಂಬಕ್ಕೆ ಸಹಾಯಧನ ವಿತರಣೆ, ಜೊತೆಗೆ ಸದಸ್ಯರಿಗೆ ವಲಯ ಮಟ್ಟದ ಕ್ರೀಡಾಕೂಟ,ಅಟಿಡೊಂಜಿ ದಿನ ಕಾರ್ಯಕ್ರಮ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಮಾದರಿ ವಲಯ ಒಕ್ಕೂಟವಾಗಿ ಬೆಳೆಯಲು ಕಾರಣರಾದ ಎಲ್ಲ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.


ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹೂವಪ್ಪ ಗೌಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ, ವಿವಾಹ ವೇದಿಕೆಯ ಸಂಚಾಲಕ ಸುರೇಶ್ ಗೌಡ ಕಲ್ಲಾರೆ, ನೆಟ್ಟಣಿಗೆ ಮುಡ್ನೂರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಕಲಾವತಿ ಎಸ್ ಗೌಡ,ಮಾಡ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಶೇಷಪ್ಪ ಗೌಡ ಪರನೀರು, ದೇಲಂಪಾಡಿ ಒಕ್ಕೂಟ ಅಧ್ಯಕ್ಷರಾದ ಹರೀಶ್ ಮುದಿಯಾರು,ಮನೆಯವರಾದ ಕೆ ಸಿ ಚಂದ್ರಶೇಖರ ಗೌಡ ಹೊಸಮನೆ ಉಪಸ್ಥಿತರಿದ್ದರು.


ಕಾರ್ಯಕ್ರಮದ ಅತಿಥಿಗಳನ್ನು ಯೋಗೀಶ್ ಕಾವು,ಶ್ರೀಕಾಂತ್ ಕಾವು,ಜಗ್ಗಾನಾಥ ಗೌಡ ಪಟ್ಟೆ, ವಿಠಲ ಗೌಡ ಕಟ್ಟಪುಣಿ, ಕುಶಾಲಪ್ಪ ಗೌಡ ಬದಿಯಡ್ಕ,ಉಷಾಲಕ್ಷ್ಮೀ, ಶ್ರೀಧರ ಗೌಡ ಕನ್ನಯ, ಮೋಹನಾಗಿ ಬೀಜಾಂತಡ್ಕ, ವಿಮಲ ಸಾರೆಪ್ಪಡಿ, ನವೀನ ಬಿ ಡಿ,ಭಾಸ್ಕರ ಗೌಡ ದೊಡ್ಡಮನೆ ವೀಳ್ಯ ನೀಡಿ ಗೌರವಿಸಿದರು. ನವೀನ ಬಿ ಡಿ ತಂಡದವರು ಪ್ರಾರ್ಥಿಸಿದರು, ಲೋಕೇಶ್ ಚಾಕೋಟೆ ಸ್ವಾಗತಿಸಿದರು,ಯೋಗೀಶ್ ಕಾವು ವಂದಿಸಿದರು, ಸುಮಲತಾ ಕಾರ್ಯಕ್ರಮ ನಿರೂಪಿಸಿದರು.


ಕುಂಬ್ರ ವಲಯದ 13 ಮಾದರಿ ದಂಪತಿಗಳಿಗೆ ಸನ್ಮಾನ
ಕುಂಬ್ರ ವಲಯದ ಮಾಡ್ನೂರು, ನೆಟ್ಟಣಿಗೆ ಮುಡ್ನೂರು, ಬಡಗನ್ನೂರು,ಅರಿಯಡ್ಕ,ಕೆದಂಬಾಡಿ,ಒಳಮೊಗ್ರು ದೇಲಂಪಾಡಿ ಗ್ರಾಮಗಳ ಮಾದರಿ ದಂಪತಿಗಳಾದ ಸಾಂತಪ್ಪ ಗೌಡ ಮತ್ತು ಬೋಳಿಯಕ್ಕ ಚಾಕೋಟೆ,ರುಕ್ಮಯ್ಯ ಗೌಡ ಮತ್ತು ದುರ್ಗ ವಾತಿ ಅಡ್ದಂತ್ತಡ್ಕ ಮನೆ ದೇಲಂಪಾಡಿ,ಗೋಪಾಲ ಗೌಡ ಮತ್ತು ದೇವಕಿ ಮಾಡ್ನೂರು,ನಾರಾಯಣ ಗೌಡ ಮತ್ತು ಅಕ್ಕಯ್ಯ, ಚಾವಡಿ ಮನೆ, ದೇಲಂಪಾಡಿ,ರಾಮಣ್ಣ ಗೌಡ ಮತ್ತು ಪಾರ್ವತಿ ಅರಿಯಡ್ಕ,ಪದ್ಮಯ್ಯ ಗೌಡ ಮತ್ತು ಪದ್ಮಾವತಿ ವಾಲ್ತಾಜೆ ಮನೆ, ದೇಲಂಪಾಡಿ,ಜತ್ತಪ್ಪ ಗೌಡ ಮತ್ತು ಕುಂಇಾಕ್ಕ
ಸಂಪಿಗೆ ಮಜಲು ಪಟ್ಟೆ , ಬಡಗನ್ನೂರು,ಸೇಸಪ್ಪ ಗೌಡ ಮತ್ತು ಪಟ್ಲಮೂಲೆ ಮನೆ, ಕೆದಂಬಾಡಿ. ಸುಬ್ಬಯ್ಯ ಗೌಡ ಮತ್ತು ಪೂವಕ್ಕ ವಾಲ್ತಜೆ ಮನೆ,ದೇಲಂಪಾಡಿ,ಮಂಜಪ್ಪ ಗೌಡ ಮತ್ತು ತಿಮ್ಮಕ್ಕ ಹೊಸ ಮನೆ, ಮಾಡ್ನೂರು,ಹೊನ್ನಪ್ಪ ಗೌಡ ಮತ್ತು ಮಿನಾಕ್ಷಿ ಸಾರಕುಟೇಲು ಮನೆ ಈಶ್ವರಮಂಗಲ,ಕೃಷ್ಣಪ್ಪ ಗೌಡ ಮತ್ತು ಸುಂದರಿ, ಪರ್ಪುಂಜ,ಶೇಷಪ್ಪ ಮತ್ತು ಹೊನ್ನಮ್ಮ ಚಾಕೋಟೆ, ಮಾಡ್ನೂರು ಇವರುಗಳನ್ನು ಶಾಲು ಹೊದಿಸಿ,ಹಾರ ಹಾಕಿ ಪೇಟ ತೊಡಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here