ಸವಣೂರು : ಪ್ರಸಿದ್ಧ ನಾಟಿವೈದ್ಯ ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಇ.ಎಸ್.ವಾಸುದೇವ ಇಡ್ಯಾಡಿ ಅವರ ಮನೆಗೆ ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಧೀರಜ್ ಅಶೋಕ್ ರಾವ್ ಸೂರ್ಯವಂಶಿ ಭೇಟಿ ನೀಡಿದರು.
ಬಿಜೆಪಿ ಮೊಗರು ಬೂತ್ ಸಮಿತಿ-66 ಇದರ ವತಿಯಿಂದ ಧೀರಜ್ ಅಶೋಕ್ ರಾವ್ ಸೂರ್ಯವಂಶಿ ಅವರನ್ನು ಸ್ವಾಗತಿಸಿಲಾಯಿತು.
ಧೀರಜ್ ಅಶೋಕ್ ರಾವ್ ಸೂರ್ಯವಂಶಿ ಅವರೊಂದಿಗೆ ಅವರ ತಂದೆ ಅಶೋಕ್ ರಾವ್ ಸೂರ್ಯವಂಶಿ ಆಗಮಿಸಿದ್ದರು. ಅವಿನಾಶ್ ಜಿ ನಾಯಕ್,ಯುವರಾಜ್ ಭೋಷಾಲಾ,ಪ್ರಮೋದ್ ಪಾಟೀಲ್ ಸಾಂಗ್ಲಿ ಅವರು ಸೂರ್ಯವಂಶಿ ಅವರೊಂದಿಗೆ ಆಗಮಿಸಿದರು.
ನಾಟಿವೈದ್ಯರಾದ ವಾಸುದೇವ ಇಡ್ಯಾಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸವಣೂರು ಪ್ರಾ. ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಶ್ರೀಧರ ಇಡ್ಯಾಡಿ, ರಾಜೇಶ್ ಇಡ್ಯಾಡಿ, ಹಿತೇಶ್ ಮೆದು,ಮಹಾಲಕ್ಷ್ಮಿ ವಾಸುದೇವ, ರಾಜೇಂದ್ರ ಪ್ರಸಾದ್ ಇಡ್ಯಾಡಿ ಮೊದಲಾದವರಿದ್ದರು.