ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಪೇರಲ್ತಡ್ಕ ಒಕ್ಕೂಟದ ತ್ರೈಮಾಸಿಕ ಸಭೆ ಅಧ್ಯಕ್ಷ ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಡಿ.15 ರಂದು ಪೇರಲ್ತಡ್ಕ ಶಾಲೆಯಲ್ಲಿ ನಡೆಯಿತು.
ಆಂತರಿಕ ಲೆಕ್ಕ ಪರಿಶೋಧಕಿ ಲತಾ ಯೋಜನೆಯ ನೀತಿ ನಿಯಮ,ಸಾಲದ ಬಡ್ಡಿ ಮತ್ತು ಪಿ.ಆರ್.ಕೆ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಪದ್ಮಾವತಿ. ಡಿ ಮಾಹಿತಿ ನೀಡಿದರು. ನಂತರ ಶ್ರೀ ವಿಷ್ಣು, ಪಂಚಶ್ರೀ, ಜನ್ಮ ಭೂಮಿ ಸಂಘಕ್ಕೆ ಲಾಭಾoಶ ವಿತರಣೆ ಮಾಡಲಾಯಿತು.
ಒಕ್ಕೂಟದ ಉಪಾಧ್ಯಕ್ಷೆ ಮಮತಾ, ಕಾರ್ಯದರ್ಶಿ ಭುವನೇಶ್ವರಿ, ಜೊತೆ ಕಾರ್ಯದರ್ಶಿ ಸುಜಾತಾ, ಕೋಶಾಧಿಕಾರಿ ಗೌರಿ ಉಪಸ್ಥಿತರಿದ್ದರು. ಶ್ರೀನಿಧಿ ಸಂಘದ ಶಶಿಕಲಾ ಸ್ವಾಗತಿಸಿ, ಭುವನೇಶ್ವರಿ ವಂದಿಸಿದರು. ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸದಸ್ಯರು ಪಾಲ್ಗೊಂಡರು.