ಪುತ್ತೂರು: ಕೆಮ್ಮಾಯಿ ಬಡಾವಿನಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಇಂಟರ್ಲಾಕ್ ರಸ್ತೆಯನ್ನು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನ್ಯಾಕ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಉದಯಕುಮಾರ್ ಆಚಾರ್ಯ, ಬೂತ್ ಅಧ್ಯಕ್ಷ ದಯಾನಂದ್, ಕಾರ್ಯದರ್ಶಿ ರವಿ ಆಚಾರ್ಯ, ಶ್ರೀಧರ ಪೂಜಾರಿ ಬಡಾವು ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.