ಹಿರೇಬಂಡಾಡಿ: ಮುಂದಿನ 5 ವರ್ಷಗಳ ಅವಧಿಗೆ ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 13 ಸ್ಥಾನಕ್ಕೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.
ಸಾಮಾನ್ಯ ಸ್ಥಾನದಿಂದ ಕೃಷ್ಣಪ್ಪ ಗೌಡ ಕುಬಲ, ಸುರೇಶ ಅಡೆಕ್ಕಲ್, ರುಕ್ಮಯ್ಯ ಗೌಡ ಪನ್ನೊಟ್ಟು, ಧರ್ಣಪ್ಪ ಗೌಡ ಪೆರಾಬೆ, ಬೆಳಿಯಪ್ಪ ಗೌಡ ಜಾಲು, ತಿಮ್ಮಪ್ಪ ಗೌಡ ಕಜೆಕೋಡಿ, ಕೊರಗಪ್ಪ ಗೌಡ ಒನಡ್ಕ ಆಯ್ಕೆಯಾಗಿದ್ದಾರೆ. ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನದಿಂದ ಪದ್ಮನಾಭ ಪಾಲೆತ್ತಡಿ, ಜನಾರ್ದನ ಎ., ಅನಂತಿಮಾರು, ಮಹಿಳಾ ಮೀಸಲು ಸ್ಥಾನದಿಂದ ಚಂದ್ರಾವತಿ ಜಿ.ನೆಹರುತೋಟ, ಭಾರತಿ ನಿಡ್ಡೆಂಕಿ, ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ಶಾರದಾ ಕರೆಂಕಿ ಹಾಗೂ ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರದಿಂದ ಬಾಲಕೃಷ್ಣ ನಾಯ್ಕ್ ಮುರದಮೇಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ವಿಶಾಲಾಕ್ಷಿ ಸಹಕರಿಸಿದರು.
ಅಧ್ಯಕ್ಷರಾಗಿ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಭಾರತಿ ನಿಡ್ಡೆಂಕಿ ಆಯ್ಕೆ
ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೃಷ್ಣಪ್ಪ ಕುಬಲ ಹಾಗೂ ಉಪಾಧ್ಯಕ್ಷರಾಗಿ ಭಾರತಿ ನಿಡ್ಡೆಂಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ನಿರ್ದೇಶಕರು ಉಪಸ್ಥಿತರಿದ್ದರು.