ಅಧ್ಯಕ್ಷರಾಗಿ ರಫೀಕ್ ಎಂ.ಎ, ಉಪಾಧ್ಯಕ್ಷರಾಗಿ ಯಶೋಧ ಆಯ್ಕೆ
ಸವಣೂರು ಮೊಗರು: ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ ಸವಣೂರು ಮೊಗರು ಇಲ್ಲಿ 2024-25ನೇ ಸಾಲಿನ ನೂತನ ಎಸ್.ಡಿ.ಎಂ.ಸಿ ಸಮಿತಿ ರಚನೆಯು ಡಿ.19ರಂದು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ. ಬಿ. ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ರಫೀಕ್ ಎಂ. ಎ ಉಪಾಧ್ಯಕ್ಷರಾಗಿ ಯಶೋಧ, ಸದಸ್ಯರುಗಳಾಗಿ ನುಸೈಬಾ, ಅಸ್ಮಾನ್, ಅನಿಷಾ, ತಾಹಿರಾ, ಪುಷ್ಪಾವತಿ, ಉಮ್ಮರ್, ಅಬ್ದುಲ್ ಸೋಂಪಾಡಿ, ಕೇಶವ, ನಝೀರ್ ಮಾಂತೂರು, ಮಜೀದ್ ಶಾಂತಿನಗರ, ಇಸ್ಮಾಯಿಲ್ ಗಡಿಪಿಲ, ಅಬ್ದುಲ್ ಗಾಫರ್ ಶಾಂತಿನಗರ, ಹಮೀದ್ ಶಾಂತಿನಗರ,ರುಬಿನ, ಗೀತಾ. ಕೆ, ರಜಿಯಾ, ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಸ್ಥಳೀಯ ಪ್ರತಿನಿಧಿಗಳಾದ ಚೆನ್ನು, ರಝಕ್ ಕೆನರಾ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಗುರುಗಳಾದ ಜುಸ್ತಿನಾ ಲಿಡ್ವಿನ್ ಡಿಸೋಜ ಹಾಗೂ ಸಹ ಶಿಕ್ಷಕಿ ಕು. ಸವಿತಾ ಇವರುಗಳು ಎಸ್ ಡಿಎಂಸಿ ರಚನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗುಲ್ಸನ್ ಕೌಸರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕು.ದಯಾಮಣಿ ವಂದನಾರ್ಪಣೆ ಮಾಡಿದರು. ಶಿಕ್ಷಕಿ ಸುನೀತಾ ಸಹಕರಿಸಿದರು.