ನಿಡ್ಪಳ್ಳಿ ಚರ್ಚ್ ವತಿಯಿಂದ ಹೊಂಡ ಬಿದ್ದ ರಸ್ತೆ ಬದಿ ಮಣ್ಣು ಹಾಕಿ ದುರಸ್ತಿ

0

ನಿಡ್ಪಳ್ಳಿ: ರೆಂಜ ಮುಡ್ಪಿನಡ್ಕ ಹೋಗುವ ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ನಿಡ್ಪಳ್ಳಿ ಚರ್ಚ್ ಎದುರುಗಡೆ ಹಾದು ಹೋಗುವ ರಸ್ತೆ ಬದಿ ಮಳೆಗಾಲದಲ್ಲಿ ನೀರು ಹರಿದು ಹೊಂಡ ಬಿದ್ದ ಕಾರಣ ಅದಕ್ಕೆ ಮಣ್ಣು ಹಾಕಿಸಿ ದುರಸ್ತಿ ಕಾಮಗಾರಿಯನ್ನು ನಿಡ್ಪಳ್ಳಿ ಚರ್ಚ್‌ ವತಿಯಿಂದ ಡಿ.20 ರಂದು ನಡೆಸಲಾಯಿತು.

ರಸ್ತೆ ಬದಿ ಗುಂಡಿ ಬಿದ್ದ ಪರಿಣಾಮ ವಾಹನ ಸವಾರರಿಗೆ ಸೈಡ್ ಕೊಡಲು ಬಹಳ ಸಮಸ್ಯೆಯಾಗಿತ್ತು. ಡಾಮಾರು ರಸ್ತೆಯಿಂದ ವಾಹನ ಕೆಳಗೆ ಇಳಿಸಿದರೆ ಮಗುಚಿ ಬೀಳುವ ಪರಿಸ್ಥಿತಿ. ಇದನ್ನು ಮನಗಂಡು ಚರ್ಚ್ ವತಿಯಿಂದ ಈ ಕಾಮಗಾರಿಯನ್ನು ನಡೆಸಲಾಯಿತು. ಇದರಿಂದ ವಾಹನ ಸವಾರರು ಸುಗಮವಾಗಿ ವಾಹನ ‍ಚಲಾಯಿಸಲು ಅನುಕೂಲಕರವಾಗಿದೆ.     

ನಿಡ್ಪಳ್ಳಿ ಚರ್ಚ್ ವತಿಯಿಂದ ಚರ್ಚ್ ಎದುರು ರಸ್ತೆಯ ಬದಿಯ ಹೊಂಡಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡಲಾಯಿತು. ಇನ್ನಾದರೂ  ಜನಪ್ರತಿ ನಿಧಿಗಳು, ಇಲಾಖೆಯ ಅಧಿಕಾರಿಗಳು ಇದರತ್ತ ಗಮನ ಹರಿಸಿ ಆದಷ್ಟು ಬೇಗ ರಸ್ತೆ ಅಗಲೀಕರಿಸಿ ಡಾಮರೀಕರಣ ಮಾಡಿ ಸಂಭವಿಸಬಹುದಾದ ಅಪಘಾತ ತಪ್ಪಿಸಲಿ ಎಂಬುದು ನಿಡ್ಪಳ್ಳಿಯ ಸಾರ್ವಜನಿಕರ ಆಶಯವಾಗಿದೆ.

LEAVE A REPLY

Please enter your comment!
Please enter your name here