ವಿಟ್ಲ: ಮರ ಕಡಿಯುವ ಯಂತ್ರಕ್ಕೆ ಸಿಲುಕಿ ಕೈ ಬೆರಳುಗಳು ತುಂಡಾಗಿ ಗಂಭೀರ ಗಾಯಗೊಂಡಿದ್ದ ಕೇರಳ ಮೂಲದ 26 ವರ್ಷದ ಯುವಕನ ಕೈ ಬೆರಳುಗಳಿಗೆ ಕಣಚೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೈ ಬೆರಳುಗಳನ್ನು ಮರು ಜೋಡಿಸಲಾಗಿದೆ.
ಕೇರಳದ ಕಣ್ಣೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕನ ಬಲಗೈಯ ಮೂರು ಬೆರಳುಗಳು ತುಂಡಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಸ್ಥಳೀಯ ಎರಡು ಆಸ್ಪತ್ರೆಗಳಿಗೆ ತೆರಳಿದರೂ ಸೂಕ್ತ ಚಿಕಿತ್ಸೆ ಲಭಿಸದ ಹಿನ್ನೆಲೆಯಲ್ಲಿ ಸುಮಾರು ಏಳು ಗಂಟೆಗಳ ಬಳಿಕ ರೋಗಿಯನ್ನು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಕಣಚೂರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ತಂಡ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿತ್ತು. ಸುಮಾರು ಏಳು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಉಂಗುರ ಬೆರಳು ಹಾಗೂ ನಡುವಿನ ಬೆರಳುಗಳನ್ನು ಯಶಸ್ವಿಯಾಗಿ ಮರು ಜೋಡಿಸಲಾಗಿದೆ. ತೀವ್ರ ಅಪಘಾತದ ಪರಿಣಾಮ 12 ಗಂಟೆಗಳಲ್ಲಿ ರಕ್ತನಾಳಗಳನ್ನು ಪುನಃ ಜೀವಂತಗೊಳಿಸುವಲ್ಲಿ ತಂಡ ಯಶಸ್ವಿಯಾಗಿದ್ದು ಇದೀಗ ಯುವಕ ಗುಣಮುಖರಾಗುತ್ತಿದ್ದಾರೆ.
ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅರ್ಥೋಪೆಡಿಕ್ ವಿಭಾಗದ ಪ್ರಾಧ್ಯಾಪಕ ಹಾಗೂ ಘಟಕ ಮುಖ್ಯಸ್ಥ ಡಾ. ಜಲಾಲುದ್ದೀನ್ ಎಂ.ವಿ. ಅವರ ಮಾರ್ಗದರ್ಶನದಲ್ಲಿ ಡಾ. ನಿಖಿಲ್ ಜಯಶೀಲನ್, ಡಾ. ಶ್ರವಣ್, ಡಾ. ಅಶ್ವಿನ್, ಡಾ. ಅಥುಲ್ ಮತ್ತು ವಿನಾಯಕ ಅವರ ನೇತೃತ್ವದಲ್ಲಿ ಬಲಗೈ ಮಧ್ಯ ಮತ್ತು ಉಂಗುರ ಬೆರಳುಗಳನ್ನು ಮರುಸ್ಥಾಪಿಸುವಲ್ಲಿ ತಂಡ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆಯ ಎಂಟು ದಿನಗಳ ನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ನುರಿತ ತಜ್ಞ ವೈದ್ಯರ ತಂಡ,ಅತ್ಯಾಧುನಿಕ ವ್ಯವಸ್ಥೆ ಶಸ್ತ್ರಚಿಕಿತ್ಸೆಗೆ ಸಹಕಾರಿ
ಕಣಚೂರು ಆಸ್ಪತ್ರೆಯ ಅರ್ಥೋಪಿಡಿಕ್ ಶಸ್ತ್ರಚಿಕಿತ್ಸಾ ವಿಭಾಗ ಪರಿಣತ ವೈದ್ಯರನ್ನು ಒಳಗೊಂಡಿದ್ದು, ಇದರಿಂದಾಗಿ ಸುದೀರ್ಘ ಏಳು ಗಂಟೆಗಳ ಕಾಲ ಶಸ್ತçಚಿಕಿತ್ಸೆ ನಡೆಸಿ ಯಶಸ್ವಿಯಾಗಲು ಸಾಧ್ಯವಾಗಿದೆ. ಬಹಳಷ್ಟು ವಿಳಂಬವಾಗಿ ಪ್ರಕರಣ ಆಸ್ಪತ್ರೆಗೆ ಬಂದರೂ, ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವ್ಯವಸ್ಥೆಯೂ ಶಸ್ತçಚಿಕಿತ್ಸೆ ಯಶಸ್ಸಿಗೆ ಪೂರಕವಾಗಿದೆ. ಈಗಾಗಲೇ ಕಣಚೂರು ಆರ್ಥೊಪೆಡಿಕ್ ವಿಭಾಗ ಜಾಯಿಂಟ್ ರಿಪ್ಲೇಸ್‌ಮೆಂಟ್ ಕ್ಲಿನಿಕ್, ಹಸ್ತ ಮತ್ತು ಮೈಕ್ರೋಶಸ್ತ್ರಚಿಕಿತ್ಸೆ, ಬಾಲರ ಅರ್ಥೋಪಿಡಿಕ್ಸ್, ಆಥ್ರೋಸ್ಕೋಪಿ, ಮೆದುಳಿನ ಶಸ್ತ್ರಚಿಕಿತ್ಸೆ, ಗಾಯ ಮತ್ತು ಮುರಿದುಹೋದ ಎಲುಬುಗಳ ನಿರ್ವಹಣೆ, ಕ್ರೀಡಾ ವೈದ್ಯಕೀಯ ಮತ್ತು ಮೂಳೆ ಕ್ಯಾನ್ಸರ್ ಚಿಕಿತ್ಸಾ ವಿಭಾಗವನ್ನು ನಡೆಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ.
—-ಡಾ. ಜಲಾಲುದ್ದೀನ್
ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅರ್ಥೋಪಿಡಿಕ್ ವಿಭಾಗದ ಪ್ರಾಧ್ಯಾಪಕ ಹಾಗೂ ಘಟಕ ಮುಖ್ಯಸ್ಥರು