ಪುತ್ತೂರು: ಯೂನಿಯನ್ ಬ್ಯಾಂಕ್ ಆಫ್ ಮಂಗಳೂರು ಪುತ್ತೂರು ಕ್ಲಸ್ಟರ್ ಶಾಖೆಗಳ ವತಿಯಿಂದ ಪುತ್ತೂರು ತಾಲೂಕಿನ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಬೊಳ್ವಾರ್ ಮಹಾವೀರ ಕಾನ್ಪರೇನ್ಸ್ ಹಾಲ್ ನಲ್ಲಿ ನಡೆಯಿತು.
ಯೂನಿಯನ್ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಛೇರಿಯ ಉಪಪ್ರಬಂಧಕ ರಾಜಮುನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಏಳಿಗೆಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಾದೇಶಿಕ ಕಛೇರಿಯ ರೂರಲ್ ಅಗ್ರಿ ಡೆವಲಪ್ಮೆಂಟ್ ನ ಪ್ರಬಂಧಕ ದಿನೇಶ್ ಎಚ್.ಕೆ ಯುನಿಯನ್ ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಗಳ ಕುರಿತು ಮಾಹಿತಿ ನೀಡಿದರು.ಉಪ್ಪಿನಂಗಡಿ ಪುತ್ತೂರು, ವಿಟ್ಲ,ಪೆರ್ಲಂಪಾಡಿ ಶಾಖೆಗಳ ಪ್ರಬಂಧಕರು ,ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 35 ಸ್ವಸಹಾಯ ಸಂಘಗಳ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ಬೊಳ್ವಾರ್ ಯೂನಿಯನ್ ಬ್ಯಾಂಕ್ ಸಿಬ್ಬಂದಿ ದೀಪಕ್ ಸ್ವಾಗತಿಸಿ, ಉಪ್ಪಿನಂಗಡಿ ಯೂನಿಯನ್ ಬ್ಯಾಂಕ್ ಪ್ರಬಂಧಕ ಸ್ಮಿತೇಶ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.