ಪುತ್ತೂರು: ಎರಡು ಪ್ರತ್ಯೇಕ ಕಳ್ಳತನ ಪ್ರಕರಣ- ಮೂವರು ಕಳ್ಳಿಯರನ್ನು ಬಂಧಿಸಿದ ಪುತ್ತೂರು ಪೊಲೀಸರು

0

ಅಸಲಿಯ ಬದಲಿಗೆ ನಕಲಿ ಉಂಗುರವಿಟ್ಟು ಕಳ್ಳತನ ಕೃತ್ಯ

ಗಮನ ಬೇರೆಡೆ ಹರಿಸಿ ಬ್ಯಾಗ್‌ನಿಂದ ಚಿನ್ನಾಭರಣ ಕಳವು

ಪುತ್ತೂರು: ಡಿ.13ಮತ್ತು ಡಿ.19ರಂದು ಪುತ್ತೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಎಡರು ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಕಳ್ಳಿಯರನ್ನು ಡಿ.20ರಂದು ಪುತ್ತೂರು ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಜ್ಯುವೆಲ್ಲರ್‍ಸ್ ಶಾಪ್‌ನಿಂದ ಕಳವು:


ಪುತ್ತೂರು ಕೋರ್ಟ್ ರಸ್ತೆಯಲ್ಲಿನ ಸಮುಖ್ ಜ್ಯುವೆಲ್ಲರ್‍ಸ್ ವೊಂದರಿಂದ ಡಿ.13ರಂದು ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಚಿನ್ನ ಖರೀದಿ ನೆಪದಲ್ಲಿ ಬಂದ ಮಹಿಳೆಯೋರ್ವರು ರೂ. 77ಸಾವಿರ ಮೌಲ್ಯದ 9 ಗ್ರಾಂ ತೂಕದ 3 ಚಿನ್ನದ ಉಂಗುರಗಳನ್ನು ಕಳವು ಮಾಡಿದ್ದರು. ಈ ಕುರಿತು ಸಂಸ್ಥೆಯ ಮಾಲಕ ಶಿವಪ್ರಸಾದ್ ಭಟ್ ಅವರು ಸಿಸಿ ಕ್ಯಾಮರದಲ್ಲಿ ಕಳವು ಮಾಡಿರುವ ಕುರಿತು ಮಾಹಿತಿ ತಿಳಿದು ಡಿ.19ರಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಮಂಗಳೂರು ನೀರುಮಾರ್ಗ ನಿವಾಸಿ ವಿದ್ಯಾ ಎಂಬವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಮದ ರೂ. 77ಸಾವಿರ ಮೌಲ್ಯದ ಚಿನ್ನಾಭರಣವನು ವಶಪಡಿಸಲಾಗಿದೆ.


ಬಸ್‌ನಿಲ್ದಾಣದಲ್ಲಿ ಬ್ಯಾಗ್‌ನಿಂದ ಚಿನ್ನಾಭರಣ ಕಳವು:

ಗೋಳ್ತಮಜಲು ಗ್ರಾಮದ ಸರಸ್ವತಿ ಎಂಬವರು ಡಿ.19ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದಲ್ಲಿ ನಿಂತಿದ್ದ ವೇಳೆ ಇಬ್ಬರು ಮಹಿಳೆಯರು ಅವರ ಗಮನವನ್ನು ಬೇರೆಡೆ ಹರಿಸಿ ಸರಸ್ವತಿ ಅವರ ಬ್ಯಾಗ್‌ನಿಂದ ರೂ. 25ಸಾವಿರ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದರು. ಈ ಕುರಿತು ಸರಸ್ವತಿ ಅವರು ಡಿ.19ರಂದು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಳವು ಕೃತ್ಯ ಎಸಗಿದ ಬೆಂಗಳೂರು ರಾಜಾಜಿನಗರದ ಜ್ಯೋತಿ ಮತ್ತು ಯಶೋಧ ಅವರನ್ನು ಡಿ.20ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟಿನಲ್ಲಿ ಎರಡು ಪ್ರತ್ಯೇಕ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬೇರೊಂದು ಅಂಗಡಿಯಿಂದ ಕಳವಿಗೆ ಯತ್ನಿಸಿದಾಗ ಕಳವು ಪ್ರಕರಣ ಬೆಳಕಿಗೆ


ಚಿನ್ನಾಭರಣದ ಅಂಗಡಿಯಿಂದ ಚಿನ್ನದ ಉಂಗುರಗಳನ್ನು ಕಳವು ಮಾಡಿದ ಮಹಿಳೆ ಪಕ್ಕದ ಅಂಗಡಿಯೊಂದರಲ್ಲಿ ತನ್ನ ಕೈಚಲಕ ತೋರಿಸಿದಾಗ ಅಂಗಡಿಯ ಮಾಲಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ಅವರು ಪೊಲೀಸರಿಗೆ ಮಾಹಿತಿ ನೀಡಿದಂತೆ ಪೊಲೀಸರು ವಿಚಾರಣೆ ನಡೆಸಿದಾಗ ಸ್ಥಳೀಯ ಅಂಗಡಿಯೊಂದರಿಂದ ಚಿನ್ನದ ಉಂಗುರಗಳನ್ನು ಕಳವು ಮಾಡಿದ ಕುರಿತು ಬಾಯಿ ಬಿಟ್ಟಿದ್ದರು. ಈ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅಸಲಿ ಬದಲಿ ನಕಲಿ ಉಂಗುರ !


ಚಿನ್ನದ ಉಂಗುರು ಕಳವು ಮಾಡುತ್ತಿರುವ ಮಹಿಳೆ ಚಿನ್ನದ ಅಂಗಡಿಯಲ್ಲಿ ಉಂಗುರಗಳನ್ನು ವೀಕ್ಷಣೆ ಮಾಡಿ ಒಂದೊಂದ ಉಂಗುರವನ್ನು ಬೆರಳಿಗೆ ಹಾಕಿ ತೆಗೆಯುವ ಮೂಲಕ ತನ್ನ ಬೆರಳಿನಲ್ಲಿದ್ದ ನಕಲಿ ಉಂಗುರವನ್ನು ಅಂಗಡಿ ಮಾಲಕರ ಕಣ್ಣು ತಪ್ಪಿಸಿ ಬದಲಾಯಿಸುತ್ತಿದ್ದರು. ಇದು ಅಂಗಡಿ ಮಾಲಕರ ಗಮನಕ್ಕೂ ಬರುತ್ತಿರಲಿಲ್ಲ. ಯಾಕೆಂದೆ ಅವರ ಉಂಗುರದ ಟ್ರೇಡೆಯಲ್ಲಿ ಎಷ್ಟು ಉಂಗುರವಿತ್ತೋ ಅಷ್ಟೇ ಉಂಗುರ ಅದರಲ್ಲಿ ಇರುತ್ತಿತ್ತು. ಆದರೆ ಕೆಲ ದಿನಗಳ ಬಳಿಕ ಚಿನ್ನವನ್ನು ಪರಿಶೀಲೀಸುತ್ತಿರುವಾಗ ಟ್ರೇಯಲ್ಲಿ ನಕಲಿ ಉಂಗುರ ಇರುವುದು ಬೆಳಕಿಗೆ ಬಂದು ಸಿಸಿ ಕ್ಯಾಮರ ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here