ತಿರುಮಲೇಶ್ವರ ಭಟ್ಟರಿಗೆ ಹವ್ಯಕ ಶಿಕ್ಷಕ ರತ್ನ ಸನ್ಮಾನ

0

ಪುತ್ತೂರು: ಇಲ್ಲಿನ ಕೇಪುಲು-ತಾರಿಗುಡ್ಡೆ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ತಿರುಮಲೇಶ್ವರ ಭಟ್ಟ ಅವರು ಹವ್ಯಕ ಶಿಕ್ಷಕ ರತ್ನ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.


ತಿರುಮಲೇಶ್ವರ ಭಟ್ ಅವರು ಬೆಳ್ತಂಗಡಿ ತಾಲೂಕಿನಲ್ಲಿ 1978ರಲ್ಲಿ ಶಿಕ್ಷಕ ವೃತ್ತಿಗೆ ಸೇರಿ ಮುಖ್ಯೋಪಾಧ್ಯಾಯರಾಗಿ, ಪದವೀಧರೇತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡವರು. ಸುಮಾರು 39 ವರ್ಷ ಶಿಕ್ಷಕರಾಗಿದ್ದ ಸಂದರ್ಭ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ 26 ವರ್ಷ ಬಹುಮಾನ ಪಡೆದುಕೊಂಡಿದ್ದಾರೆ. ಮಾಸ್ಟರ‍್ಸ್ ಅಥ್ಲೆಟಿಕ್ಸ್ ಎಸೋಸಿಯೇಶನ್‌ನವರು ನಡೆಸಿದ ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲೂ ಹಲವು ಪ್ರಶಸ್ತಿ ಅಲ್ಲದೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ಸಾಧನೆಯನ್ನು ಗಮನಿಸಿ ಬೆಂಗಳೂರಿನಲ್ಲಿ ನಡೆಯುವ ಹವ್ಯಕ ಸಮ್ಮೇಳನದಲ್ಲಿ ’ಹವ್ಯಕ ಶಿಕ್ಷಕ ರತ್ನ’ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.‌


ಇವರು ನಿವೃತ್ತ ರಾಜ್ಯ ಸರಕಾರಿ ನೌಕರರ ತಾಲೂಕು ಸಂಘದ ಕಾರ್ಯದರ್ಶಿಯಾಗಿ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಕೋಶಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here